ಕೆ.ಆರ್.ನಗರ: ಮಾಜಿ ಸಚಿವ ಸಾ.ರಾ ಮಹೇಶ್ ಅವರ ಅಭಿವೃದ್ದಿ ಕಾರ್ಯಕ್ರಮಗಳು ಎಂದಿಗೂ ಕ್ಷೇತ್ರದಲ್ಲಿ ಅಳಿಸಲಾಗದ ಕುರುಹನ್ನು ಉಳಿಸಿದ್ದು ಮುಂದಿನ ದಿನಗಳಲ್ಲಿ ಮತ್ತೆ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮು ತಿಳಿಸಿದರು.

ಕೆ.ಆರ್ ನಗರದ ಅರ್ಕೇಶ್ವರ ದೇವಾಲಯದಲ್ಲಿ ಶಾಸಕ ಸಾ.ರಾ ಮಹೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಕೇಕ್ ಕತ್ತರಿಸಿ ನಂತರ ಮಾತನಾಡಿದ ಅವರು ರಾಜಕೀಯ ಕಾರಣದಿಂದ ಅಧಿಕಾರ ಕಳೆದುಕೊಂಡಿರಬಹುದು ಆದರೆ ಇಂದಿಗೂ ಅವಳಿ ತಾಲ್ಲೋಕಿನ ಜನರು ಪ್ರತಿಸುವ ವ್ಯಕ್ತಿಯಾಗಿದ್ದು ಕ್ಷೇತ್ರದಲ್ಲಿ ೧೫ವರ್ಷಗಳಿಂದ ಆಗಿರುವ ಅಭಿವೃದ್ದಿ ಕಾರ್ಯಗಳೇ ಅವರ ಹೆಗ್ಗುರುತಾಗಿ ಉಳಿದುಕೊಂಡಿವೆ ಎಂದರು.
ಉಪಾಧ್ಯಕ್ಷ ಹೊಸೂರುಕುಚೇಲ್ ಮಾತನಾಡಿ ನಿರಂತರವಾಗಿ ಕ್ಷೇತ್ರದಲ್ಲಿ ಜನಪರವಾಗಿ ದುಡಿದ ಹಾಗೂ ಸಾಮಾಜಿಕ ಚಿಂತನೆಯೇ ಮುಖ್ಯಧ್ಯೇಯವಾಗಿಟ್ಟುಕೊಂಡಿರುವ ಸಾ.ರಾ ಮಹೇಶ್ ಅವರ ಕಳಕಳಿ ಅನುಕರಣೀಯವಾಗಿದ್ದು ಅವರ ಅಧಿಕಾರಾವಧಿಯಲ್ಲಿ ಶಿಕ್ಷಣ,ಆರೋಗ್ಯ,ರಸ್ತೆ,ಕುಡಿಯುವ ನೀರು,ರೈತಪರ ಕಾರ್ಯಕ್ರಮಗಳಿಗೆ ಲೆಕ್ಕವಿಲ್ಲದಷ್ಟು ಅನುದಾನ ನೀಡಿ ಕ್ಷೇತ್ರದ ಪ್ರತಿಗ್ರಾಮಗಳಿಗೂ ಕಾವೇರಿ ನದಿಯಿಂದ ನೀರು ಕೊಟ್ಟಿದ್ದು ಜನತೆ ಇಂದಿಗೂ ಮರೆತಿಲ್ಲ ಅವರ ಸೇವೆ ಕ್ಷೇತ್ರಕ್ಕೆ ಅಗತ್ಯವಾಗಿದ್ದು ಮುಂದಿನ ಬಾರಿ ಅವರ ಗೆಲುವು ಖಚಿತ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಮಾಜಿ ಸಚಿವ ಸಾರಾ ಮಹೇಶ್ ಅವರಿಗೆ ಸನ್ಮಾನಿಸಿ ಕೇಕ್ ಕತ್ತರಿಸಿ ಅಭಿಮಾನಿಗಳು ಕಾರ್ಯಕರ್ತರು ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಸಂಘದ ನಿರ್ದೇಶಕರಾದ ರಾಧಾಕೃಷ್ಣ, ಮಂಜುನಾಥ್, ಎಸ್.ಆರ್ ಪ್ರಕಾಶ್, ತಿಮ್ಮೇಗೌಡ, ಮಹೇಶ್, ರವೀಂದ್ರ ಕಾರ್ಯಾಧ್ಯಕ್ಷ ಹೊಸಳ್ಳಿವೆಂಕಟೇಶ, ಮುಖಂಡರಾದ ಮಾಜಿ ಗ್ರಾಪಂ ಸದಸ್ಯೆ ನಂದಿನಿರಮೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.