ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಶಾಲಾ ಪ್ರಾರ್ಥನಾ ಅವಧಿಯಲ್ಲಿ ದಿನನಿತ್ಯದ ಚಟುವಟಿಕೆಗಳ ಜೊತೆಗೆ ವಿಶೇಷ ಚಟುವಟಿಕೆಗಳನ್ನು ಆಯೋಜಿಸುವುದರಿಂದ ಶಾಲಾ ಮಕ್ಕಳಲ್ಲಿ ನಾಯಕತ್ವ ಕೌಶಲ ಮತ್ತು ಜ್ಞಾನಾತ್ಮಕ-ಸಾಕ್ಷರತಾ ಕೌಶಲಗಳನ್ನು ಬೆಳೆಸಬಹುದು ಎಂದು ಕುಪ್ಪಹಳ್ಳಿ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಎಸ್.ವಸಂತಕುಮಾರ ಹೇಳಿದರು.
ಸಾಲಿಗ್ರಾಮ ತಾಲ್ಲೂಕಿನ ಕುಪ್ಪಹಳ್ಳಿ ಕ್ಲಸ್ಟರ್ ನ ಬಸವರಾಜ ಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಪ್ಪಹಳ್ಳಿ ಕ್ಲಸ್ಟರ್ ನ ಎ ಮುಖ್ಯ ಶಿಕ್ಷಕರಿಗೆ ಆಯೋಜಿಸಿದ್ದ ಶಿಕ್ಷಣ ಇಲಾಖೆಯ ನೂತನ “ಸಚೇತನ” ಕಾರ್ಯಕ್ರಮದ ಕೈಪಿಡಿ ಹಾಗೂ ಶಾಲಾ ಪ್ರಾರ್ಥನಾ ಅವಧಿಯ ಚಟುವಟಿಕೆಗಳ 2025-26 ರ ಕ್ಯಾಲೆಂಡರ್ ಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು ಸಚೇತನ ಕಾರ್ಯಕ್ರಮವನ್ನು ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಹೊರತುಪಡಿಸಿ,ಶಾಲಾ ವಾತಾವರಣದಲ್ಲಿ ಕಲಿಕೆಯ ಅನುಭವ ಪಡೆಯಲು ಅನೇಕ ಅವಕಾಶಗಳಿವೆ, ಆ ಮೂಲಕ ಮಕ್ಕಳು ಸಂತೋಷ, ಕುತೂಹಲ, ಉತ್ಸಾಹದಿಂದ ಸಹಪಠ್ಯ ಚಟುವಟಿಕೆಗಳ ಮೂಲಕ ಬಹಳಷ್ಟು ಅಂಶಗಳನ್ನು ಕಲಿಯುತ್ತಾರೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಶಾಲಾ ಮಕ್ಕಳಿಗೆ ಸರ್ಕಾರದ ವಿದ್ಯಾವಿಕಾಸ ಯೋಜನೆಯ 2 ನೇ ಸಮವಸ್ತ್ರವನ್ನು ಮಕ್ಕಳಿಗೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಕ್ಲಸ್ಟರ್ ನ ಮುಖ್ಯ ಶಿಕ್ಷಕರುಗಳಾದ ಜಲೇಂದ್ರ,ಪ್ರಕಾಶ,ಮಂಜುನಾಥ,ಶಿವಣ್ಣ,
ಹೆಮಂತಕುಮಾರ,ದಶರಥ,ಕುಮಾರಶಟ್ಟಿ,ಪ್ರದೀಪ ಕುಮಾರ,ಮಹದೇವ, ಕವಿತಾ.ಉಮೇಶ, ಭದ್ರಯ್ಯ,ಶಶಿಕುಮಾರ್, ಮತ್ತು ಕ್ಲಸ್ಟರ್ ನ ಇತರೆ ಶಿಕ್ಷಕರು,ಶಾಲಾ ಮಕ್ಕಳು ಉಪಸ್ಥಿತರಿದ್ದರು…