ಬೆಂಗಳೂರು: ನಾಯಕತ್ವ ಗೊಂದಲದಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟಾಗಿದ್ದು, ಈ ಗೊಂದಲವನ್ನು ಆದಷ್ಟು ಬೇಗ ಬಗೆಹರಿಸಲು ಹೈಕಮಾಂಡ್ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಕರೆಸಿ ಮಾತನಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಈ ಬಗ್ಗೆ ಸರ್ಕಾರದ ಕಾರ್ಯಕ್ರಮಗಳು ಜನರ ಗಮನ ಸೆಳೆಯುವ ಬದಲಿಗೆ ಗೊಂದಲಗಳೇ ಜನರ ಗಮನ ಸೆಳೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಬಿ.ಕೆ ಹರಿಪ್ರಸಾದ್, ಮುನಿಯಪ್ಪ ಅವರನ್ನು ಭೇಟಿಯಾದ ನಂತರ ಮಾತನಾಡಿ, ಸರ್ಕಾರದಲ್ಲಿನ ಗೊಂದಲವನ್ನು ಹೈಕಮಾಂಡ್ ಶೀಘ್ರವೇ ಪರಿಹರಿಸಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಸತ್ಯ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಗೊಂದಲದ ಹಿನ್ನೆಲೆಯಲ್ಲಿ ಸಿಎಂ ಹಾಗೂ ಡಿಸಿಎಂ ಅವರನ್ನು ಕರೆಸಿ ಹೈಕಮಾಂಡ್ ಮಾತಾಡಬೇಕು ನಾಯಕತ್ವ ಗೊಂದಲವನ್ನು ಆದಷ್ಟು ಬೇಗ ಬಗೆಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ದೆಹಲಿಗೆ ಹೋದಾಗ ನಾನು ಮನವಿ ಮಾಡಿದ್ದೆ ಎಂದ ಅವರು, ನಮ್ಮ ಸರ್ಕಾರದ ಕಾರ್ಯಕ್ರಮಗಳು ಈ ಗೊಂದಲದಿಂದ ಜನರಿಗೆ ಕಾಣ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಕಾರ್ಯಕ್ರಮಗಳು ಜನರ ಗಮನ ಸೆಳೆಯುತ್ತಿಲ್ಲ. ಸರ್ಕಾರದ ಗೊಂದಲಗಳಷ್ಟೇ ಜನರ ಗಮನ ಸೆಳೆಯುತ್ತಿದೆ ಎಂದ ಅವರು, ಈ ಬೆಳವಣಿಗೆ ಬಗ್ಗೆ ಹೈಕಮಾಂಡ್ ಕೇಳಿದರೆ ನಾವು ಸಲಹೆ ಹೇಳುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಸಚಿವ ಕೆ.ಎಚ್ ಮುನಿಯಪ್ಪ ಅವರನ್ನು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಅವರು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದ್ದು, ಭೇಟಿ ಕುರಿತಾಗಿ ಮಾತನಾಡಿ, “ನಾವು ಹಳೆಯ ಸ್ನೇಹಿತರು ಹಾಗಾಗಿ ಭೇಟಿ ಆಗ್ತಿದ್ದೇನೆ. ಮುನಿಯಪ್ಪ ಹೇಳಿದ್ದನ್ನೇ ನಾನು ಹೇಳೋದು. ಆದಷ್ಟು ಬೇಗ ಹೈಕಮಾಂಡ್ ನಾಯಕರು ಇದನ್ನು ಬಗೆಹರಿಸಬೇಕು. ಹೈಕಮಾಂಡ್ ಅಂತ ಅನಿಸಿಕೊಳ್ಳೋದೇ ಆಗ. ಸದ್ಯದ ಬೆಳವಣಿಗೆಯನ್ನು ಗಂಭೀರವಾಗಿ ಮತ್ತು ಸೂಕ್ಷ್ಮವಾಗಿ ನೋಡಬೇಕು” ಎಂದರು.
ಈ ನಡುವೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮುನಿಯಪ್ಪ ಪರ ಮುಂದಿನ ಸಿಎಂ ಘೋಷಣೆ ಕೂಗಲಾಯಿತು. ಈ ವೇಳೆ ಬೆಂಬಲಿಗನಿಗೆ ಗದರಿದ ಮುನಿಯಪ್ಪ ಹಾಗೆಲ್ಲ ಕೂಗಬಾರದು ಎಂದು ಎಚ್ಚರಿಕೆ ನೀಡಿದರು.



