Friday, April 11, 2025
Google search engine

Homeಅಪರಾಧಮನೆ ಕೆಲಸ ಬಿಟ್ಟು ಮೊಬೈಲ್ ನಲ್ಲಿ ಕಾಲಹರಣ : ಮನನೊಂದು ಯುವತಿ ಆತ್ಮಹತ್ಯೆ

ಮನೆ ಕೆಲಸ ಬಿಟ್ಟು ಮೊಬೈಲ್ ನಲ್ಲಿ ಕಾಲಹರಣ : ಮನನೊಂದು ಯುವತಿ ಆತ್ಮಹತ್ಯೆ

ಬಾದಾಮಿ : ನಿತ್ಯ‌ ಮೊಬೈಲ್ ನಲ್ಲೇ ಕಾಲ ಕಳೆಯುತ್ತಿದ್ದ ಮಹಿಳೆಗೆ ಹೆತ್ತವರು ಬುದ್ದಿ ಹೇಳಿದ್ದನ್ನೆ ಮಾನಸಿಕ ಮಾಡಿಕೊಂಡ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬಾದಾಮಿ ರೈಲ್ವೆ ಸ್ಟೇಶನ್ ಏರಿಯಾದ‌ ಮನೆಯಲ್ಲಿ ಸಂಭವಿಸಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ವಿದ್ಯಾ ಹನಮಂತ ದೊಡಮನಿ (28) ಎಂದು ಗುರುತಿಸಲಾಗಿದೆ.

ವಿದ್ಯಾ ನಿತ್ಯ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದಳು. ಮನೆಯ ಕೆಲಸ‌ ಮಾಡದೇ ಮೊಬೈಲ್ ನೋಡುತ್ತ, ಹಾಡು ಕೇಳುತ್ತ ಕಾಲ ಕಳೆಯುತ್ತಿದ್ದಳು. ಹಾಗೆಲ್ಲ ಮಾಡಬೇಡ, ಮೊಬೈಲ್ ಬಿಟ್ಟು ಮನೆ ಕೆಲಸ ಮಾಡು ಎಂದು ಬುದ್ದಿಮಾತು ಹೇಳಿದ್ದರು. ಅದನ್ನೆ ಮಾನಸಿಕವಾಗಿ ತೆಗೆದುಕೊಂಡು ಮನೆಯಲ್ಲಿ ನೇಣು ಹಾಕಿಕೊಂಡಿದ್ದಳು. ಕೂಡಲೇ ಅವಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯೆ ಅಸುನೀಗಿದ್ದಾಳೆ.

ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular