Sunday, April 20, 2025
Google search engine

Homeರಾಜ್ಯಸುದ್ದಿಜಾಲಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ನಂಜನಗೂಡು: ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಲ್ಲಹಳ್ಳಿಯ ೨೫ಕ್ಕೂ ಹೆಚ್ಚು ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಹುಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಲಕ್ಷ್ಮಿ, ಬಸವರಾಜು, ಎಚ್.ಎಸ್.ಗಿರಿರಾಜು, ಎಚ್.ಎಂ.ರೇವಣ್ಣ, ಮಂಜುಳಾ ಪ್ರಕಾಶ್, ಎಚ್.ಟಿ.ಬಸವರಾಜು, ಮುಖಂಡರಾದ ರಾಘವೇಂದ್ರ, ಮಹದೇವಸ್ವಾಮಿ, ಪ್ರಭುಸ್ವಾಮಿ, ಶಿವು, ಶ್ರೀಕಂಠ, ಎಚ್.ಟಿ.ಮಹೇಶ್, ನಾಗೇಶ್, ಲೋಕೇಶ್, ಕುಮಾರ್, ಯೋಗೀಶ್, ಶ್ರೀಕಾಂತ ಸೇರಿದಂತೆ ೨೫ಕ್ಕೂ ಹೆಚ್ಚಿನ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಅವರಿಗೆ ಶಾಸಕರಾದ ದರ್ಶನ್ ಧ್ರುವನಾರಾಯಣ ಹಾಗೂ ರವಿಶಂಕರ್ ಪಕ್ಷದ ಬಾವುಟ, ಶಾಲು ಹೊದಿಸಿ ಬರಮಾಡಿಕೊಂಡರು.

ದರ್ಶನ್ ಧ್ರುವನಾರಾಯಣ ಮಾತನಾಡಿ, `ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ ಹಾಗೂ ಗುರುರಾಜ ಪಟೇಲ್ ಅವರ ಪ್ರಯತ್ನದಿಂದಾಗಿ ೨೫ ಮಂದಿ ಪಕ್ಷಕ್ಕೆ ಬಂದಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಇನ್ನಷ್ಟು ಸದೃಢಗೊಳ್ಳಲು ಸಹಕಾರಿಯಾಗಲಿದೆ’ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಕಳಲೆ ಕೇಶವಮೂರ್ತಿ, ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ಶ್ರೀಕಂಠನಾಯಕ, ಗುರುರಾಜ ಪಟೇಲ್, ಎನ್.ಮಹೇಶ್, ಎಚ್.ಎನ್.ಶಿವನಂಜನಾಯಕ, ಎನ್.ಬಸವರಾಜು, ಪುಟ್ಟನಾಯಕ, ನವಿಲೂರು ಗ್ರಾ.ಪಂ ಅಧ್ಯಕ್ಷ ರೇವಣ್ಣ, ಕಳಲೆ ರಾಜೇಶ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular