ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ದೇಶದ ಬೆನ್ನೆಲುಬಾದ ರೈತರು ಹಾಗೂ ಸೈನಿಕರಷ್ಟೇ ಪ್ರಾಮುಖ್ಯತೆಯನ್ನು ಕಟ್ಟಡ ಕಾರ್ಮಿಕರುಗಳು ಹೊಂದಿದ್ದು ಇವರೆಲ್ಲರ ಕೆಲಸದಿಂದಾಗಿ ನಮ್ಮ ರಾಷ್ಟ್ರ ಸುಭಿಕ್ಷೆಯಾಗಿರುತ್ತದೆ ಎಂದು ಸಹಾಯಕ ಕಾರ್ಮಿಕ ಆಯುಕ್ತೆ ಎಸ್.ಆರ್.ವೀಣಾ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ಕಾರ್ಮಿಕ ಇಲಾಖೆ, ತಾಲ್ಲೂಕು ಆಡಳಿತ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೋಸೈಟಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಐಇಸಿ ಚಟುವಟಿಕೆಗಳ ಕಾರ್ಯಗಾರ ಮತ್ತು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಸಂಬoಧಿಸಿದoತೆ ಹಾಗೂ ಬಾಲ ಕಾರ್ಮಿಕ/ಕಿಶೋರ ಕಾರ್ಮಿಕರಿಗೆ ಸಂಬoಧಿಸಿದoತೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರ ಕಟ್ಟಡ ಕಾರ್ಮಿಕರಿಗೆ ವಿಮೆ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಮದುವೆ, ಚಿಕಿತ್ಸಾವೆಚ್ಚ, ಪಿಂಚಣಿ ಸೌಲಭ್ಯ ಸೇರಿದಂತೆ ಅನೇಕಾ ಅನುಕೂಲಗಳನ್ನು ಕಲ್ಪಿಸಿಕೊಡುತ್ತಿದೆ. ಅಲ್ಲದೇ ಅಸಂಘಟಿತ ಕಾರ್ಮಿಕರನ್ನು ಕೂಡ ಗುರುತಿಸಿದ್ದು ಅವರುಗಳು ಕೂಡ ವಿಮೆ, ಆರೋಗ್ಯ ಚಿಕಿತ್ಸಾವೆಚ್ಚ ಸೇರಿದಂತೆ ಅನೇಖ ಸವಲತ್ತುಗಳನ್ನು ನೀಡುತ್ತಿದ್ದು ಮುಂದಿನ ದಿನಗಳಿಗೆ ಅವರಿಗು ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸುವಂತಹ ಚಿಂತನೆಯಲ್ಲಿದ್ದು ಅರ್ಹರು ಇಲಾಖೆ ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದರು.
ಕಾರ್ಮಿಕ ಸಂಘಟನೆಗಳು ಕೇವಲ ಸೌಲಭ್ಯಕ್ಕೆ ಅರ್ಜಿಗಳನ್ನು ಮಾತ್ರ ಸಲ್ಲಿಸುವುದಲ್ಲಾ ಇಲಾಖೆಯಿಂದ ಏರ್ಪಡಿಸುವ ಇಂತಹ ಕಾರ್ಯಗಾರಗಳಲ್ಲಿ ಭಾಗವಹಿಸಿ ಸರ್ಕಾರ ಮತ್ತು ಇಲಾಖೆಯಿಂದ ಕಟ್ಟಡ ಕಾರ್ಮಿಕರು ಅಸಂಘಟಿತ ಕಾರ್ಮಿಕರುಗಳಿಗೆ ಇರುವ ಯೋಜನೆಗಳು, ಅದರ ಉದ್ದೇಶಗಳನ್ನು ತಿಳಿದುಕೊಂಡು ಅವುಗಳನ್ನು ಅರ್ಹ ಕಾರ್ಮಿಕರಿಗೆ ತಿಳಿಸುವ ಜತೆಗೆ ಕಾಲ ಕಾಲಕ್ಕೆ ಸಂಘದ ನೊಂದಣಿ ಪುರ‍್ಜಿ÷್ಜÃವನ ಗೊಳಿಸುವುದು, ವಾರ್ಷಿಕರ ವರದಿ ಸಲ್ಲಿಸುವುದು, ಬೈಲಾದಲ್ಲಿರುವಂತೆ ಸಂಘದ ಚುನಾವಣೆಗಳನ್ನು ನಡೆಸುವ ಜತೆಗೆ ಇಲಾಖೆಯ ಕಾಯ್ದೆ ಕಾನೂನುಗಳ ಬಗ್ಗೆ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಎಸ್.ಚಂದನ್ ಮಾತನಾಡಿ ಸಮಾಜದಲ್ಲಿ ಭ್ರೂಣ ಹತ್ಯೆ, ಬಾಲ್ಯ ವಿವಾಹಗಳು ಸಮಾಜಿಕ ಪಿಡುಗಾಗಿದ್ದು ಇವುಗಳ ನಿರ್ಮೂಲನೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಸರ್ಕಾರ ಮತ್ತು ಇಲಾಖೆಗಳೊಂದಿಗೆ ಸಹಕರಿಸಿ ಕಾನೂನನ್ನು ಎಲ್ಲರು ಗೌರವಿಸಬೇಕು ಎಂದು ಕೋರಿದರು.
ಜನ ಸಾಮಾನ್ಯರ ಅನುಕೂಲಕ್ಕೆ ತಕ್ಕಂತೆ ಕಾಲ ಕಾಲಕ್ಕೆ ಕಾನೂನುಗಳ ತಿದ್ದುಪಡಿಗಳು, ಬದಲಾವಣೆಗಳು ಆಗುತ್ತಿರುತ್ತವೆ. ಆದರೇ ಕೆಲವರಿಗೆ ಇವುಗಳ ಅರಿವಿಲ್ಲದೇ ಕಾನೂನಿನ ನೆರವು ಸಿಗದೆ ನ್ಯಾಯದಿಂದ ವಂಚಿತರಾಗಿರುತ್ತಾರೆ ಅಂತವರಿಗೆ ಉಚಿತವಾಗಿ ಕಾನೂನು ನೆರವು ನೀಡುವ ಸಲುವಾಗಿ ೧೯೮೭ ರಲ್ಲಿ ಕಾನೂನು ಸೇವಾ ಸಮಿತಿಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಈ ಸಮಿತಿಯಲ್ಲಿ ೨೦ ಮಂದಿ ವಕೀಲರ ತಂಡು ಕೆಲಸ ಮಾಡುತ್ತಿದ್ದು ಇದರ ವ್ಯಾಪ್ತಿ ವಿಸ್ತಾರಗೊಳ್ಳುತ್ತಾ ಪ್ರತಿ ವರ್ಷ ೧೫ ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಎಲ್ಲರಲ್ಲೂ ಅರಿವು ಮೂಡಿಸುತ್ತಿದೆ. ಇದರ ಉದ್ದೇಶ ಅಶಕ್ತರು, ವೃದ್ಧರು, ಮಕ್ಕಳು, ಮಹಿಳೆಯರಿಗೆ ಕಾನೂನು ಸಮರ್ಪಕವಾಗಿ ಸಿಗಬೇಕು ಎಂಬುದೇ ಆಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಕುರಿತು ತಹಸಿಲ್ಧಾರ್ ಜಿ.ಸುರೇಂದ್ರಮೂರ್ತಿ, ಸಿಡಿಪಿಒ ಅಣ್ಣಯ್ಯ, ಹಿರಿಯ ಕಾರ್ಮಿಕ ನಿರೀಕ್ಷಕಿ ಬಿ.ಮಂಗಳಗೌರಿ, ಪ್ಯಾನಲ್ ವಕೀಲೆ ಕೆ.ಪ್ರಭಾವತಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕ ಹೆಚ್.ಕೆ.ಗೋವಿಂದರಾಜು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೋಸೈಟಿ ಯೋಜನಾ ನಿರ್ದೇಶಕ ಹೆಚ್.ಪಿ.ಮಲ್ಲಿಕಾರ್ಜುನ, ಕಾರ್ಮಿಕ ಇಲಾಖೆಯ ಸಿಬ್ಬಂಧಿ ಚಂದ್ರಕಾAತ್, ಶ್ರೀ ವೀರಭದ್ರೇಶ್ವರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ಹೆಚ್.ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ನಟರಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು.