ಯಳಂದೂರು: ತಾಲ್ಲೂಕಿನ ಮಲ್ಲಿಗಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ 8 ರ ಸಮಯದಲ್ಲಿ ಬಾಲಕನೊಬ್ಬನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ನಡೆದಿದೆ.
ಕಳೆದ ಒಂದು ವಾರದಿಂದ ಮಲ್ಲಿಗಹಳ್ಳಿ, ಶಿವಕಳ್ಳಿ, ಕೆಸ್ತೂರು,ಮದ್ದೂರು ಗ್ರಾಮದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಚಿರತೆಯನ್ನು ಹಿಡಿಯಲು ಹರ ಸಾಹಸ ಮಾಡುತ್ತಿದ್ದಾರೆ ಅಲ್ಲಲ್ಲಿ ಬೋನ್ ಗಳನ್ನು ಇರಿಸಿದ್ದಾರೆ ಆದರೆ ಚಿರತೆಯು ಬೋನ್ ಗೆ ಬೀಳದೆ ಕದ್ದುಮುಚ್ಚಿ ಸಂಚರಿಸುತ್ತಿದೆ.
ಮಂಗಳವಾರ ಸಂಜೆ ಮಲ್ಲಿಗಹಳ್ಳಿ ಗ್ರಾಮದ ಹರ್ಷಿತ್ (10) ಎಂಬುವ ಬಾಲಕನ ಮೇಲೆ ಚಿರತೆ ದಾಳಿ ಮಾಡಿದೆ.
ಮನೆಯಿಂದ ಹೊರ ಬಂದಿದ್ದ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿದೆ. ತಕ್ಷಣ ಗ್ರಾಮಸ್ಥರು ಮನೆಯಿಂದ ಹೊರ ಬಂದಾಗ ಚಿರತೆ ಪರಾರಿಯಾಗಿದೆ. ಗಾಯಳು ಬಾಲಕನನ್ನು ತಕ್ಷಣ ಯಳಂದೂರು ತಾಲ್ಲೂಕು ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗಾಗಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆ ಸೇರಿಸಲಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು ಚಿರತೆಯನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ.
ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಕೆಲ ಕಾಲ ವಾಗ್ದಾಳಿ ನಡೆಸಿದರು.