Friday, April 18, 2025
Google search engine

Homeಸ್ಥಳೀಯಮೇಳಾಪುರದ ಬಳಿ ಮೇಕೆ ಮೇಲೆ ಚಿರತೆ ದಾಳಿ: ೧೦ ಕ್ಕೂ ಹೆಚ್ಚಿನ ಮೇಕೆಗಳ ಸಾವು

ಮೇಳಾಪುರದ ಬಳಿ ಮೇಕೆ ಮೇಲೆ ಚಿರತೆ ದಾಳಿ: ೧೦ ಕ್ಕೂ ಹೆಚ್ಚಿನ ಮೇಕೆಗಳ ಸಾವು

ಶ್ರೀರಂಗಪಟ್ಟಣ:ತಾಲೂಕಿನ  ಮೇಳಾಪುರ ದಾಖಲೆ ಗ್ರಾಮದ ಕೃಷ್ಣಾಪುರ ಗ್ರಾಮದಲ್ಲಿ ಮೇಕೆ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಂಡ ಮೇಕೆ ಮೃತಪಟ್ಟಿರುವ ಘಟನೆ ನಡೆದಿದೆ.

ಗ್ರಾಮದ ರಾಜು ಎಂಬುವರಿಗೆ ಸೇರಿದ ಮೇಕೆ ಮೇಲೆ ಬೆಳಿಗ್ಗೆ ಚಿರತೆ ದಾಳಿ ನಡೆಸಿದೆ. ಗ್ರಾಮದ ಸುತ್ತಲೂ ಅರಣ್ಯ ಪ್ರದೇಶವಿದ್ದು ಸುಮಾರು ೫ಕ್ಕೂ ಹೆಚ್ಚು ಚಿರತೆಗಳಿರುವುದು ಕಂಡು ಬಂದಿದೆ ಎಂದು ಸ್ಥಳಿಯರು ಹೇಳುತ್ತಾರೆ, ಕುರಿ ಮೇಕೆಗಳನ್ನು ಮನೆಯಿಂದ ಮೇಯಿಸಲು ಹೋದ ಮೇಲೆ ದಾಳಿ ಮಾಡುತ್ತಿದ್ದುದ್ದು ಇದೀಗ ಗ್ರಾಮಕ್ಕೆ ಬಂದು ಮೇಕೆಗಳನ್ನು ಹೊತ್ತು ಹೋಗುತ್ತಿವೆ.

ಇಲ್ಲಿವರೆಗೆ ೧೦ಕ್ಕೂ ಹೆಚ್ಚು ಮೇಕೆ ಮರಿಗಳ ತಿಂದು ಹಾಕಿವೆ. ಇದಲ್ಲದೆ ಗ್ರಾಮಸ್ಥರು ಮೇಕೆ ಮೇಯಿಸುವಾಗಿ ಅವರ ಮೇಲೆ ದಾಳಿ ಮಾಡಲು ಬಂದಿರುವ ನಿದರ್ಶನಗಳಿವೆ ಎಂದು ಸ್ಥಳಿಯರು ಹೇಳುತ್ತಾರೆ.

ಇದರಿಂದ ಇಲ್ಲಿನ ಗ್ರಾಮಸ್ಥರುಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಗೇ ಹಲವು ದಿನಗಳಿಂದ ಚಿರತೆದಾಳಿ ಕುರಿತಾಗಿ ತಿಳಿಸಿದರು ಸ್ಥಳಕ್ಕೆ ಬಂದು ಚಿರತೆ ಹಿಡಿಯುವ ಪ್ರಯತ್ನ ಮಾಡಿಲ್ಲ. ಒಂದು ವೇಳೆ ದೂರವಾಣಿ ಮೂಲಕ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿದಾಗ  ನೀವೆ ಬಂದು ಚಿರತೆ ಹಿಡಿಯುವ ಬೋನ್ ತೆಗೆದುಕೊಂಡು ಹೋಗಿ ನಾಯಿಗಳ ಕಟ್ಟಿ ಚಿರತೆ ಬೋನಿಗೆ ಬೀಳುವಂತೆ ಮಾಡಿಕೊಳ್ಳಿ ಎಂದು ಹಾರಿಕೆ ಉತ್ತರವನ್ನು ನೀಡುತ್ತಾರೆ ವಿನಃ ಇಲ್ಲಿವರೆಗೆ ಬೋನ್ ತಂದು ಚಿರತೆ ಹಿಡಿಯುವ ಪ್ರಯತ್ನ ಮಾಡಿಲ್ಲ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ.

ಕೂಡಲೇ ಅಧಿಕಾರಿಗಳು ಭೇಟಿ ನೀಡಿ ಬೋನ್ ಅಳವಡಿಸಿ ಚಿರತೆ ಹಿಡಿಯುವ ಕೆಲಸ ಮಾಡಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ.

RELATED ARTICLES
- Advertisment -
Google search engine

Most Popular