Friday, April 4, 2025
Google search engine

Homeಸ್ಥಳೀಯಅಮ್ಮನ ಮಡಿಲಿಗೆ ಚಿರತೆ ಮರಿಗಳು

ಅಮ್ಮನ ಮಡಿಲಿಗೆ ಚಿರತೆ ಮರಿಗಳು

ಮೈಸೂರು: ನಗರದ ಹೊರವಲಯದಲ್ಲಿರುವ ಭುಗತಗಳ್ಳಿಯ ಎಸ್‌ಎಂಪಿ ಲೇಔಟ್‌ನಲ್ಲಿ ಪೈಪ್‌ಲೈನ್ ಒಳಗೆ ಪತ್ತೆಯಾಗಿದ್ದ ಮೂರು ಚಿರತೆಯ ಮರಿಗಳನ್ನು ಅದರ ತಾಯಿ ಜೊತೆ ಸೇರಿಸುವಲ್ಲಿ ಚಿರತೆ ಕಾರ್ಯಪಡೆ ತಂಡವು ಯಶಸ್ವಿ ಆಗಿದೆ.

ಫೆ. ೭ರಂದು ರಾತ್ರಿ ಎಸ್‌ಎಂಪಿ ಲೇಔಟ್‌ನಲ್ಲಿನ ದೊಡ್ಡ ಪೈಪುಗಳ ಒಳಗೆ ಎರಡು ಮರಿಗಳು ಪತ್ತೆ ಆಗಿದ್ದವು. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಚಿರತೆ ಕಾರ್ಯಪಡೆಯ ಸಿಬ್ಬಂದಿ ಮರಿಗಳನ್ನು ರಕ್ಷಿಸಿದ್ದರು. ಚಿರತೆ ಬಗ್ಗೆ ಭಯ ಪಡದೇ ಅನುಸರಿಸಬೇಕಾದ ಕ್ರಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು. ೯ರಂದು ಅದೇ ಜಾಗದಲ್ಲಿ ಇನ್ನೊಂದು ಮರಿ ಸಹ ಪತ್ತೆ ಆಗಿತ್ತು.

ಅದಾದ ಆರು ದಿನಗಳ ಬಳಿಕ, ಗುರುವಾರ ಅದೇ ಪೈಪ್ ಜಾಗದಲ್ಲಿ ತಾಯಿ ಚಿರತೆ ಕಂಡುಬಂದಿದ್ದು, ಅದನ್ನು ಸೆರೆ ಹಿಡಿದು ಮರಿಗಳೊಂದಿಗೆ ಬಿಡಲಾಗಿದೆ. ತಾಯಿ ಹಾಗೂ ಮರಿ ಚಿರತೆಗಳ ಆರೋಗ್ಯ ತಪಾಸಣೆ ನಡೆದಿದ್ದು, ಅವುಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗುವುದು. ನಂತರದಲ್ಲಿ ಕಾಡಿಗೆ ಬಿಡಲಾಗುವುದು’ ಎಂದು ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಬಸವರಾಜು ತಿಳಿಸಿದರು.

RELATED ARTICLES
- Advertisment -
Google search engine

Most Popular