ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ಪ್ರತಾಪ್ ಎಂಬುವವರ ಜಮೀನಿನಲ್ಲಿ ಮೂರು ಚಿರತೆ ಮರಿಗಳು ಕಾಣಿಸಿಕೊಂಡ ಘಟನೆ ಆತಂಕ ಮೂಡಿಸಿದೆ. ಗ್ರಾಮಸ್ಥರು ಚಿರತೆ ಮರಿಗಳನ್ನ ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು.
ಚಿರತೆ ಮರಿಗಳನ್ನು ಕಂಡು ಚಿರತೆ ಮರಿಗಳ ತಾಯಿ ಹತ್ತಿರದಲ್ಲಿರಬಹುದೆಂಬ ಭೀತಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದು, ತಾಯಿ ಚಿರತೆಯನ್ನು ಸೆರೆಹಿಡಿಯಲು ಒತ್ತಾಯಿಸಿದ್ದಾರೆ.



