ಮಂಡ್ಯ: ತಾಲೂಕಿನ ಹೊಳಲು (ಗಾಣದಾಳು, ಚಂದಗಾಲು ರಸ್ತೆ) ಗ್ರಾಮದ ಮುಂಡಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಳೆದ ರಾತ್ರಿ ಚಿರತೆ ಪ್ರತ್ಯಕ್ಷವಾಗಿದೆ.
ಚಂದಗಾಲು ಗ್ರಾಮಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಒಂಟಿ ಚಿರತೆಯು ಪ್ರತ್ಯಕ್ಷವಾದಾಗ ಕಾರಿನಲ್ಲಿದ್ದವರು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲದಲ್ಲಿ ಬಿಟ್ಟಿದ್ದು ಇದೀಗ ಅದು ವೈರಲ್ ಆಗಿದೆ.
ಸಾಮಾಜಿಕ ಜಾಣತದಲ್ಲಿ ವಿಡಿಯೋ ನೋಡಿ ಅಕ್ಕಪಕ್ಕದ ಗ್ರಾಮಸ್ಥರು ರಾತ್ರಿ ವೇಳೆ ಸಂಚರಿಸುವುದಕ್ಕೆ ಭಯ ಬೀತರಾಗಿದ್ದಾರೆ. ಅಲ್ಲದೇ ಕಬ್ಬು ಕಟಾವು ಮಾಡಲು ಕೂಲಿ ಕಾರ್ಮಿಕರು ಬರುತ್ತಿಲ್ಲ ಅವರೂ ಸಹ ಭಯಭೀತರಾಗಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಇದನ್ನು ಗಮದಲ್ಲಿಟ್ಟುಕೊಂಡು ಚಿರತೆಯನ್ನು ಸೆರೆ ಹಿಡಿಯಬೇಕೆಂದು ಹಾಗೂ ಸಾರ್ವಜನಿಕರಲ್ಲಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.