ವರದಿ: ಸ್ಟೀಫನ್ ಜೇಮ್ಸ್..
ಹುಕ್ಕೇರಿ: ಕಿರಿಯರಿಂದ ಹಿರಿಯರ ವರೆಗೂ ನಮ್ಮದೇ ಆದ ಕೆಲಸಗಳ ಒತ್ತಡದಿಂದ ಮಾನಸಿಕ ಕ್ಷೆಭೆ ಅನುಭವಿಸುತ್ತಿದ್ದೇವೆ. ಅದರಿಂದ ಹೊರಬಂದು ಸರಳ ಮತ್ತು ಸ್ವಸ್ಥ ಜೀವನ ರೂಪಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ ಹೇಳಿದರು ಇಲ್ಲಿನ ಹೊರವಲಯದ ಕ್ಯಾರಗುಡ್ಡ ಬಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಮತ್ತು ಹಿರಿಯರ ದಿನವನ್ನು ಉದ್ಘಾಟಿಸಿ ಮಾತನಾಡಿ, ಊಟ, ನಿದ್ದೆ ಮತ್ತು ಕರ್ತವ್ಯದಲ್ಲಿ ಸಮಯ ಪರಿಪಾಲನೆ ಅನುಸರಿಸಬೇಕು. ಒತ್ತಡ ಮುಕ್ತ ಬದುಕು ನಮ್ಮದಾಗಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಉದಯ ಕುಡಚಿ ಮಾತನಾಡಿದರು. ವಕೀಲ ಕೆ.ಪಿ.ಶಿರಗಾಂವಕರ ಸಾಮಾನ್ಯ ಕಾನೂನುಗಳ ಕುರಿತು ವಿವರಿಸಿದರು. ಪ್ರಾಚಾರ್ಯ ಪ್ರಕಾಶ ಲಕ್ಷೆಟ್ಟಿ, ವಕೀಲ ಅನೀಲ ಕರೋಶಿ, ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಉಪಾಧ್ಯಕ್ಷ ಬಿ.ಎಂ.ಜಿನರಾಳಿ, ಕಾರ್ಯದರ್ಶಿ ಎಸ್.ಜಿ.ನದಾಫ್, ಪೊಲೀಸ್ ಇನ್‌ಸ್ಪೆಕ್ಟರ್ ಮಹಾಂತೇಶ ಬಸ್ಸಾಪುರೆ ಇತರರಿದ್ದರು. ಆರ್.ಬಿ.ಪಾಟೀಲ ನಿರೂಪಿಸಿದರು. ಎಸ್.ಟಿ.ಸಾಳುಂಕೆ ವಂದಿಸಿದರು