ಗುಂಡ್ಲುಪೇಟೆ :ರಾಜ್ಯದ ಜನತೆಗೆ ಸರ್ಕಾರ ಪ್ರತಿ ತಿಂಗಳು ಒಂದೊಂದು ಜಯಂತಿ ಮಾಡಿ ದುಂದು ವೆಚ್ಚಮಾಡಿ ಸಮಯ ವ್ಯರ್ಥಮಾಡುವ ಬದಲು ಎಲ್ಲಾ ಜಯಂತಿ ಗಳನ್ನು ಒಂದೇ ವೇದಿಕೆಯಲ್ಲಿ ಮಾಡಿ ಎಲ್ಲಾ ಜನರನ್ನು ಒಂದುಗೂಡಿಸಿ ಎಂದು ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್ ತಿಳಿಸಿದರು.
ಗುಂಡ್ಲುಪೇಟೆ ಪಟ್ಟಣದಲ್ಲಿ ಶ್ರೀ ಭಕ್ತ ಕನಕದಾಸ ಜಯಂತೋತ್ಸವ ಕಾರ್ಯಕ್ರಮ ಇವರು ಮಾತನಾಡಿದರು.
ಸಿದ್ದರಾಮಯ್ಯ ರವರ ಸರ್ಕಾರ ಸಂವಿಧಾನ ಜಾಥಾ ಕಾರ್ಯಕ್ರಮ ವನ್ನು ಮಾಡುತ್ತಿದ್ದಾರೆ ,ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಯೊಂದು ಕೆಲಸ ಕಾರ್ಯಗಳು ನಡೆಯಬೇಕು ಹಾಗಾಗಿ ಸುಧಾರಣೆಯತ್ತ ಕಾಂಗ್ರೆಸ್ ಸರ್ಕಾರ ಮುನ್ನಡೆಯುತ್ತಿದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಎಲ್ಲಾ ಮಹನೀಯರ ಸಿದ್ದಾಂತ ಗಳನ್ನು ಪಾಲಿಸಿ ಎಂದು ತಿಳಿಸಿದರು.