ಮೈಸೂರು: ಭರತ್ ಮಂಜೇಗೌಡರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು ಈ ಭವ್ಯ ಭಾರತ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಮುಖಾಂತರ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಬಾಳಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.
ಸಿ.ಎನ್. ಮಂಜೇಗೌಡರ ಪುತ್ರ ಭರತ್ ಮಂಜೇಗೌಡರ ೩೬ನೇ ವರುಷದ ಹುಟ್ಟುಹಬ್ಬವನ್ನು ಶ್ರೀರಾಂಪುರದ ಅವರ ನಿವಾಸದಲ್ಲಿ ಕೇಕ್ ಕತ್ತರಿಸಿ ಮಗನಿಗೆ ಆಶೀರ್ವದಿಸಿ ಮಾತನಾಡಿದ ಅವರು ಇಂದು ಪ್ರಪಂಚದಲ್ಲಿ ಜ್ಞಾನದ ಮುಂದೆ ಯಾವ ಶಕ್ತಿಯೂ ಇಲ್ಲದಾಗಿದ್ದು ಶಿಕ್ಷಣದಿಂದಲೇ ದೇಶ ಅಭಿವೃದ್ಧಿಯಾಗಲು ಸಾಧ್ಯವಾಗಿರುವುದರಿಂದ ಪ್ರಪಂಚದಾದ್ಯಂತ ಭಾರತದ ಯುವಕರು ಕೆಲಸ ಮಾಡುತ್ತಿದ್ದಾರೆ.
ಆದ್ದರಿಂದ ಭರತ್ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ. ಗ್ರಾಮೀಣ ಭಾಗದ ಬಡವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಜಯಪುರದ ಬಳಿ ಸಿ.ಎನ್.ಎಂ. ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾನೆ. ಅವನಿಗೆ ಚಾಮುಂಡೇಶ್ವರಿ ತಾಯಿ ಒಳ್ಳೆಯದನ್ನು ಮಾಡಲಿ. ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿಯವರು ಹಾಗೂ ಮಾಜಿ ಸಚಿವರಾದ ಸಾ.ರಾ. ಮಹೇಶ್‌ರವರ ಆಶೀರ್ವಾದದಿಂದ ಮುಂದೆ ರಾಜಕಾರಣಕ್ಕೆ ಬಂದರೆ ಬರಬಹುದು ಎಂದರು.
ಭರತ್ ಮಂಜೇಗೌಡ ಮಾತನಾಡಿ ಸ್ನೇಹಿತರು, ಅಭಿಮಾನಿಗಳು ನನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಅವರ ಪ್ರೀತಿಗೆ ನಾನು ಚಿರಋಣಿಯಾಗಿರುತ್ತೇನೆ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಅಣೆಕಟ್ಟೆಗಳೆಲ್ಲಾ ತುಂಬಲಿ. ಚಾಮುಂಡೇಶ್ವರಿ ತಾಯಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.
ಈ ಸಂದರ್ಭದಲ್ಲಿ ಅಭಿಮಾನಿಗಳು ಭರತ್ ಮಂಜೇಗೌಡರಿಗೆ ಭಾರಿ ಗಾತ್ರದ ಗುಲಾಬಿ ಹಾರ, ಸೇಬಿನ ಹಾರ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು. ಜೆ.ಡಿ.ಎಸ್. ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷ ಅಪೆಕ್ಸ್ ಶ್ರೀನಿವಾಸ್, ಶ್ರೀರಾಂಪುರ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ರಮೇಶ್, ಟ್ಯೂಬ್ ಮಹದೇವ, ಪೈಲ್ವಾನ ದಿನೇಶ್‌ಗೌಡ, ರಾಘವೇಂದ್ರ, ಸುರೇಶ್‌ಧರ್ಮ, ಸುರೇಶ್, ಜಗದೀಶ್, ಸತೀಶ್, ಪಾರ್ಥಸಾರಥಿ, ಮಹೇಶ್, ಮಣಿ, ಪ್ರಕಾಶ್, ಹರೀಶ್, ಸಂದೀಪ್‌ಕುಮಾರ್, ಪ್ರಜ್ವಲ್‌ಶೆಟ್ಟಿ, ಫಾಸ್ಟರ್ ಜೋಸೆಫ್ ಹಾಜರಿದ್ದರು.
