Friday, April 11, 2025
Google search engine

Homeರಾಜ್ಯಕೇಂದ್ರ ಬಜೆಟ್ ನಿಂದ ಕರ್ನಾಟಕಕ್ಕೆ ಹೆಚ್ಚಿನ ನೆರವು ಸಿಗಲಿ: ಹೆಚ್ ಕೆ ಪಾಟೀಲ್

ಕೇಂದ್ರ ಬಜೆಟ್ ನಿಂದ ಕರ್ನಾಟಕಕ್ಕೆ ಹೆಚ್ಚಿನ ನೆರವು ಸಿಗಲಿ: ಹೆಚ್ ಕೆ ಪಾಟೀಲ್

ಬೆಂಗಳೂರು: ನಾಳೆ ಕೇಂದ್ರ ಬಜೆಟ್ ಸಂಬಂಧ ಇಂದು ವಿಧಾನಸೌಧದಲ್ಲಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್ ಕೆ ಪಾಟೀಲ್ ಮಾಧ್ಯಮಗಳಿಗೆ ಮಾತನಾಡಿದರು.

ಕೇಂದ್ರ ಬಜೆಟ್ ಮಂಡನೆಯಾಗ್ತಿದೆ. ರಾಜ್ಯದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡ್ತಿದ್ದಾರೆ. ನಾವು ದೆಹಲಿಗೆ ಹೋಗಿ ಸಂಸದರ, ಕೇಂದ್ರ ಸಚಿವರ ಸಭೆ ಮಾಡಿದ್ದೆವೆ. ಕುಮಾರಸ್ವಾಮಿ ಅವರು ಹಲವು ಭರವಸೆ ನೀಡಿದ್ದಾರೆ. ಕರ್ನಾಟಕದ ಬಗ್ಗೆ ಕೆಲವು ಕಾರ್ಯಕ್ರಮವನ್ನು‌ ರೂಪಿಸೋದಾಗಿ ಹೇಳಿದ್ದಾರೆ. ಈ ರಾಜಕೀಯ ಹಿನ್ನಲೆಯಲ್ಲಿ ನಮ್ಮ ನಿರೀಕ್ಷೆಗಳು ಹೆಚ್ಚಿದೆ. ನಮ್ಮ ನೀರಿಕ್ಷೆಯಂತೆ ಕೇಂದ್ರ ಬಜೆಟ್ ಆಗಲಿ ಹೆಚ್ಚಿನ ನೆರವು ಬರಲಿ ಎಂದು ಕೇಳಿಕೊಳ್ಳುತ್ತೆನೆ ಎಂದ ಎಚ್ ಕೆ ಪಾಟೀಲ್ ಅವರು ಹೇಳಿದರು.

RELATED ARTICLES
- Advertisment -
Google search engine

Most Popular