ಮದ್ದೂರು: ನಾವು ನಾಯಿ ಬಿಸ್ಕೆಟ್ ತಿಂದುಕೊಂಡು ಬಂದ ಕುಟುಂಬದವರಲ್ಲ ಅಸ್ಸಾಂನ ಮಾಜಿ ಮುಖ್ಯಮಂತ್ರಿ ಒಬ್ಬರು ಬಹಿರಂಗವಾಗಿ ಹೇಳಿದ್ದನ್ನು ನಾನು ಚುನಾವಣೆ ಪ್ರಚಾರದಲ್ಲಿ ಹೇಳಿದ್ದೇನೆ ಬೇಕಾದರೆ ಆ ಹೇಳಿಕೆಯನ್ನು ತರಿಸಿಕೊಂಡು ನೋಡಲಿ ಎನ್ನುವ ಮೂಲಕ ಜಿ.ಪಂ ಮಾಜಿ ಅಧ್ಯಕ್ಷ ಎಸ್. ಗುರುಚರಣ್ ರವರು ಶಾಸಕ ಕೆ.ಎಂ. ಉದಯ್ ಅವರ ವಿರುದ್ಧ ಹರಿಹಾಯ್ದರು.
ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಮೈತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಅವರ ಪರವಾಗಿ ಆಯೋಜಿಸಿದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಣದ ಮದದಲ್ಲಿ ಗೆದ್ದಿರುವ ಶಾಸಕ ಕೆಎಂ ಉದಯ್ ಮೊದಲು ಸುಸಂಸ್ಕೃತಿಯನ್ನು ಕಲಿತುಕೊಳ್ಳಲಿ ಯಾರ ಬಗ್ಗೆ ಏನು ಮಾತನಾಡಬೇಕು ಎಂದು ಅರಿತುಕೊಳ್ಳಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಯಸ್ಸಿನ ಇವನ ವಯಸ್ಸೇನು ಕುಮಾರಸ್ವಾಮಿಯವರನ್ನು ದರೋಡೆಕೋರ ಎಂದಿರುವ ಉದಯ್ ದಾಖಲೆಗಳನ್ನು ಬಿಡುಗಡೆಗೊಳಿಸಲಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಉದಯ್ ಸಿಂಗಾಪುರ ಹಾಗೂ ಶ್ರೀಲಂಕಕ್ಕೆ ಪರಾರಿಯಾಗಿದ್ದ ಪಾಪ ಅದನ್ನು ಮರೆತಿರಬೇಕು ಬೆಂಗಳೂರಿನ ಪೊಲೀಸ್ ಠಾಣೆಗಳಲ್ಲಿ ಇವನ ಮೇಲೆ ಯಾವ ಯಾವ ಪ್ರಕರಣಗಳಿವೆ ಎಂಬುದು ಜನತೆಗೆ ಗೊತ್ತಿದೆ ನಮ್ಮ ಚುನಾವಣೆಯನ್ನು ನಾವು ಮಾಡುತ್ತೇವೆ ನಿಮ್ಮ ಚುನಾವಣೆಯನ್ನು ನೀವು ಮಾಡಿ ಅದನ್ನು ಬಿಟ್ಟು ಏಕವಚನದಲ್ಲಿ ನಿಂದಿಸಿದರೆ ನಾವು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಶಾಸಕ ಕೆ.ಎಂ. ಎಚ್ಚರಿಕೆ ನೀಡಿದರು.
ನಮ್ಮ ತಾತ ನೂರಾರು ಎಕರೆಯ ಜಮೀನುದಾರರಾಗಿದ್ದರು ನಾನು ಹುಟ್ಟುವ ಮೊದಲೇ ನಮ್ಮ ದೊಡ್ಡಪ್ಪ ಮಂತ್ರಿಯಾಗಿದ್ದರು ನಮ್ಮ ತಂದೆ ಶಾಸಕರಾಗಿದ್ದವರು ನನಗೆ ಬಾಲ್ಯದಿಂದಲೇ ಸಂಸ್ಕೃತಿ ಬಂದಿದೆ ನನ್ನ ಚರಿತ್ರೆ ಏನು ನಿನ್ನ ಚರಿತ್ರೆ ಏನು ಎಂದು ಆತ್ಮವಲೋಕನ ಮಾಡಿಕೊಳ್ಳಲಿ ಎನ್ನುವ ಮೂಲಕ ಚುನಾವಣಾ ಪ್ರಚಾರದ ವೇಳೆ ಶಾಸಕ ಕದಲೂರು ಉದಯ್ ಅವರ ವಿರುದ್ಧ ಕೆಂಡಕಾರಿದರು.
ಬಿಜೆಪಿ ಮುಖಂಡ ಎಸ್.ಪಿ. ಸ್ವಾಮಿ ಜೆಡಿಎಸ್ ಯುವ ಮುಖಂಡ ಸಂತೋಷ್ ತಮ್ಮಣ್ಣ ಜೀಪಂ ಮಾಜಿ ಸದಸ್ಯರಾದ ಏನು ಮರಿಯ ಕಡೆ ಬೋರೆಯ ಜೆಡಿಎಸ್ ತಾಲೂಕು ಕಾರ್ಯಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಪುರಸಭೆ ಸದಸ್ಯ ಪ್ರಿಯಾಂಕ ಅಪ್ಪು ಪಿ. ಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ, ಮುಖಂಡರಾದ ಹೊಸಕೆರೆ ಪ್ರಸನ್ನ, ದಯಾನಂದ ಸೇರಿದಂತೆ ಇತರರಿದ್ದರು.