ಪಿರಿಯಾಪಟ್ಟಣ: ಕುರುಬ ಸಮಾಜದ ತಾಲೂಕು ಅಧ್ಯಕ್ಷರಾದ ಟಿ.ಡಿ ಗಣೇಶ್ ಅವರ ಪಕ್ಷ ಸಂಘಟನೆ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಮುಂಬರುವ ದಿನಗಳಲ್ಲಿ ಸೂಕ್ತ ರಾಜಕೀಯ ಸ್ಥಾನಮಾನ ದೊರೆಯಲಿ ಎಂದು ಕುರುಬ ಸಮಾಜದ ಯುವ ಘಟಕ ತಾಲೂಕು ಅಧ್ಯಕ್ಷ ಪಂಚವಳ್ಳಿ ಲೋಹಿತ್ ಮನವಿ ಮಾಡಿದರು.
ಕುರುಬ ಸಮಾಜ ತಾಲೂಕು ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಟಿ.ಡಿ ಗಣೇಶ್ ಅವರ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಅವರ ಹುಟ್ಟುಹಬ್ಬ ಆಚರಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಶೈಕ್ಷಣಿಕ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ತನ್ನದೇ ಆದ ವಿಶೇಷ ಕೊಡುಗೆಗಳನ್ನು ನೀಡುತ್ತಿರುವ ಟಿ.ಡಿ ಗಣೇಶ್ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ರಾಜಕೀಯ ಸ್ಥಾನಮಾನ ದೊರೆಯುವ ಮೂಲಕ ಅವರ ಸೇವೆ ಮತ್ತಷ್ಟು ಹೆಚ್ಚಲಿ ಎಂದು ಶುಭ ಕೋರಿದರು.
ಈ ಸಂದರ್ಭ ಕುರುಬ ಸಮಾಜ ತಾಲೂಕು ಅಧ್ಯಕ್ಷ ಟಿ.ಡಿ ಗಣೇಶ್ ಹಾಗೂ ಅವರ ಪತ್ನಿ ವೇದಾಕ್ಷಿ ಗಣೇಶ್, ಕುರುಬ ಸಮಾಜ ಯುವ ಘಟಕದ ಜಯಣ್ಣ, ಗಣೇಶ್, ಸ್ವಾಮಿ, ಮಹದೇವ್, ರಾಜು, ಮುಖಂಡರಾದ ಸಂಜಯ್ ಕುಮಾರ್, ಜಯರಾಜ್, ಚಂದ್ರಶೇಖರ್, ಲೋಕೇಶ್, ರವಿಕಿರಣ್, ಅನಿತಾ ಲೋಹಿತ್, ಗಗನ್, ಡಿಂಪನ ಮತ್ತಿತರಿದ್ದರು
