Saturday, April 19, 2025
Google search engine

Homeಸ್ಥಳೀಯಸಿಎಂ ಸಿದ್ದರಾಮಯ್ಯಗೆ ಬಂದಿರುವ ಜಾಗವನ್ನು ಸರ್ಕಾರಕ್ಕೆ ವಾಪಸ್ ಕೊಡಲಿ: ಹೆಚ್ ವಿಶ್ವನಾಥ್ ಕಿಡಿ

ಸಿಎಂ ಸಿದ್ದರಾಮಯ್ಯಗೆ ಬಂದಿರುವ ಜಾಗವನ್ನು ಸರ್ಕಾರಕ್ಕೆ ವಾಪಸ್ ಕೊಡಲಿ: ಹೆಚ್ ವಿಶ್ವನಾಥ್ ಕಿಡಿ

ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ತಮಗೆ ಬಂದಿರುವ ಜಾಗವನ್ನು ಸರ್ಕಾರಕ್ಕೆ ವಾಪಸ್ ಕೊಡಲಿ. ಅದೇ ಜಾಗದಲ್ಲಿ ಆಸ್ಪತ್ರೆ ಕಟ್ಟಿಸಿ ನಿಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತೆ. ಇಲ್ಲದೆ ಇದ್ದರೆ ನಿಮ್ಮ ಭ್ರಷ್ಟಾಚಾರ ಚಿರಸ್ಥಾಯಿಯಾಗಿ ಉಳಿಯುತ್ತೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದ್ದಾರೆ.

ಇಂದು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾ ಹಗರಣ ಕುರಿತು ಮಾತನಾಡಿ, ಸಿಎಂ ತಮಗೆ ೬೨ ಕೋಟಿ ರೂ. ಬರಬೇಕು ಅಂತಾರೆ. ನನಗೆ ಅರ್ಥವಾಗ್ತಿಲ್ಲ, ಇದು ಯಾವ ಥರ ಲೆಕ್ಕಚಾರ ಅಂತಾ ಹಣಕಾಸು ಸಚಿವರಾದರು ಹೀಗೆ ಮಾತಾಡಿದ್ರೆ ಹೇಗೆ? ಯಾಕೆ ಸಿದ್ದರಾಮಯ್ಯ ಮಣ್ಣಿನ ಹಿಂದೆ ಹೋಗ್ತಿದ್ದಾರೆ ಎಂದು ಹೇಳಿದ್ದಾರೆ.

ಸಮಾಜವಾದಿ ಮನಸ್ಸಿನ ಸಿದ್ದರಾಮಯ್ಯ ಯಾಕೆ ಈ ರೀತಿ ಮಣ್ಣಿನ ಹಿಂದೆ ಹೋಗುವ ರೀತಿ ಬದಲಾವಣೆ ಆದ್ರು?. ನೀವು ನಿಮ್ಮ ಅವಧಿಯಲ್ಲಿ ಒಂದು ಸೈಟ್ ಆದ್ರು ಜನ ಸಾಮಾನ್ಯರಿಗೆ ಕೊಡಿಸಿದ್ದಿರಾ?. ಸಿದ್ದರಾಮಯ್ಯ ಪತ್ನಿ ಖರೀದಿಸಿರುವ ದೇವನೂರು ಬಡಾವಣೆ ಜಾಗ ದಲಿತರಿಗೆ ಸೇರಿದ್ದು. ಜವರ ಎಂಬ ವ್ಯಕ್ತಿಗೆ ಸೇರಿದ ಜಮೀನು ಇದು. ಡಿನೋಟಿನೋಫೈ ಆದ ಜಾಗವನ್ನು ಸಿಎಂ ಪತ್ನಿಯ ಅಣ್ಣ ಖರೀದಿ ಮಾಡಿದ್ದರು. ದಾನ ಪತ್ರವಾಗಿ ೨೦೧೦ ರಲ್ಲಿ ಸಿಎಂ ಪತ್ನಿ ಹೆಸರಿಗೆ ಬಂದಿದೆ ಎಂದರು.

ಈ ಹಗರಣ ನ್ಯಾಯಾಂಗ ತನಿಖೆ ಗೆ ಒಪ್ಪಿಸಿ ಅಂತಾ ನಿಮ್ಮ ಶಿಷ್ಯರು ಸಲಹೆ ಕೊಡ್ತಾ ಇದ್ದಾರೆ. ನ್ಯಾಯಾಂಗ ತನಿಖೆ ಯಿಂದ ಯಾವ ಪ್ರಯೋಜನವಿಲ್ಲ. ಈ ಹಗರಣ ಸಿಬಿಐಗೆ ಕೊಡಿ. ಸಾವಿರಾರು ಕೋಟಿ ರೂ ಹಗರಣ ಇದು ಎಂದು ಒತ್ತಾಯಿಸಿದರು.

RELATED ARTICLES
- Advertisment -
Google search engine

Most Popular