ಹುಣಸೂರು:ಜು.16: ನಾಡಪ್ರಭು ಕೆಂಪೇಗೌಡರ ದೂರದೃಷ್ಠಿಯ ಸೇವಾ ಮನೋ ಭಾವನೆ ಹಲವಾರು ಪೇಟೆಗಳ ಕಟ್ಟುವ ಮೂಲಕ ನಾಯಕತ್ವಗುಣವನ್ನು ರೂಡಿಸಿಕೊಂಡು ಸಾಧನೆಯ ಶಿಖರವೇರಲು ಸಾಧ್ಯವಾಗಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು. ನಗರದ ಬಿಜಿಎಸ್ ಸಮುದಾಯ ನಾಡಪ್ರಭು ಕೆಂಪೇಗೌಡರ 514 ನೇ ಜಯಂತಿ ಕಾರ್ಯಕ್ರಮದಲ್ಲಿ ತಾಲೂಕಿನ ಎಸ್.ಎಸ್.ಎಲ್.ಸಿ. ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಸನ್ಮಾನದಲ್ಲಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಾಡಪ್ರಭುಗಳ ಕುಟುಂಬದಲ್ಲಿ ಮಾನವೀಯ ಮೌಲ್ಯ ಮನೆಮಾಡಿತ್ತು. ಆ ಕಾರಣಕ್ಕೆ ಅವರು ಬೃಹತ್ ನಗರವನ್ನು ನಿರ್ಮಾಣ ಮಾಡಲು ಸಾಧ್ಯವಾಯಿತು ಅವರ ಬದುಕು ನಮಗೆ ಮಾದರಿಯಾಗಲಿ ಎಂದರು.
ನಂತರ ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ ಮಾತನಾಡಿ ನಾಡಪ್ರಭು ಕೆಂಪೇಗೌಡರು ತಮ್ಮ ಬಾಲ್ಯದಲ್ಲೇ ನಾಡು ಕಟ್ಟುವ ಕನಸ್ಸು ಕಂಡಿದ್ದರು ಅದಕ್ಕೆ ತಂದೆ, ತಾಯಿಗಳ ಆರ್ಶೀವಾದ ಇತ್ತು. ಶ್ರದ್ಧೆ,ಆಸಕ್ತಿ, ಭಕ್ತಿ ಶಿಸ್ತು ಪಾಲನೆ ಅವರಲ್ಲಿ ಇದ್ದಿದ್ದರಿಂದಲೇ ಎಲ್ಲರೂ ಮೆಚ್ಚುವ ನಾಡು ಬೆಂಗಳೂರು ಸೃಷ್ಟಿಗೆ ಬಾಜನರಾಗಿದ್ದಾರೆ ಎಂದರು. ನಂತರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಗಣೇಶ್ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲ್ಲೂಕಿನಲ್ಲಿ ಪ್ರತಿವರ್ಷದಂತೆ ಈ ಭಾರಿಯೂ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಜತೆಗೆ ಕಳೆದ ವರ್ಷದಿಂದ ಕೆಂಪೇಗೌಡರ ಅದ್ದೂರಿ ಜಯಂತಿ ಆಚರಿಸುತ್ತಿದ್ದೇವೆ ಎಂದರು.