ಮೈಸೂರು : ಸ್ವಾರ್ಥವೇ ತುಂಬಿರುವ ಸಮಾಜದಲ್ಲಿ ನಿಸ್ವಾರ್ಥ ಸೇವಾ ಮನೋಭಾವವುಳ್ಳ ಇಂತಹ ದಾನಿಗಳ ಸಂಖ್ಯೆ ಹೆಚ್ಚಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.
ಹೊಸಮಠದ ನಟರಾಜ ಕಲ್ಯಾಣ ಮಂಟಪದಲ್ಲಿ ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆ, ನಾರಾಯಣ ಸೇವಾ ಸಂಸ್ಥೆ, ಜೈನ್‌ಮಿಲನ್ ಚಾರಿಟಬಲ್ ಟ್ರಸ್ಟ್, ಗುರು ಪುಷ್ಕರ ಜೈನ ಸೇವಾ ಸಮಿತಿ ಬಳ್ಳಾರಿ ವತಿಯಿಂದ ಮಾಡ್ಯುಲರ್ ಕೃತಕ ಅಂಗಗಳು ಕೈ ಮತ್ತು ಕಾಲಿನ ಅಂಗಗಳ ಮಾಪನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿ ಇರುವವರೆಲ್ಲಾ ಯಾವುದೇ ಚುನಾವಣೆಗೆ ನಿಲ್ಲುವವರಲ್ಲ ಇವರಲ್ಲಿ ಯಾವುದೇ ಸ್ವಾರ್ಥತೆ, ಜಾತಿ, ಧರ್ಮ, ಬೇದವಿಲ್ಲದೆ ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದಾರೆ.
ಸುಮಾರು ೬೦ ಲಕ್ಷ ರೂ.ಗಳ ಕೈಕಾಲುಗಳ ಕೃತಕ ಅಂಗಗಳನ್ನು ಅಳತೆ ತೆಗೆದುಕೊಂಡು ಸುಮಾರು ೩೫೦ಕ್ಕೂ ಹೆಚ್ಚು ಜನರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಇವರ. ಸೇವೆಯ ಜೊತೆಗೆ ನನ್ನದು ಸಣ್ಣ ಅಳಿಲು ಸೇವೆ ಸೇರಿಕೊಳ್ಳಲಿ ಎಂದು ೫೦ ಸಾವಿರ ರೂಗಳನ್ನು ನನ್ನ ಸ್ವಂತ ಹಣದಿಂದ ನೀಡುತ್ತಿದ್ದೇನೆ. ಸರ್ಕಾರದಲ್ಲಿ ಇದಕ್ಕಾಗಿಯೇ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರೂ ಸಹ ಎಲ್ಲರಿಗೂ ಸರ್ಕಾರವೇ ಅನುಕೂಲ ಮಾಡಲು ಸಾಧ್ಯವಿಲ್ಲ. ಇಂತಹ ಸ್ವಯಂ ಸೇವಾ ಸಂಸ್ಥೆಗಳು ದಾನಿಗಳು ಮುಂದೆ ಬಂದು ಬಡವರ ಪಾಲಿಗೆ ದಾರಿದೀಪವಾಗಬೇಕು. ಈ ಅವಕಾಶದ ಸದುಪಯೋಗವನ್ನು ಪ್ರತಿಯೊಬ್ಬ ಅಂಗವಿಕಲರೂ ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೊಸಮಠದ ಶ್ರೀ ಚಿದಾನಂದಸ್ವಾಮಿಜಿ, ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯನಂದತೀರ್ಥ ಸ್ವಾಮೀಜಿ, ಪ್ರಾಂತ್ಯ ಅಧ್ಯಕ್ಷರಾದ ಲಯನ್ ಹೇಮಂತ್ ಕುಮಾರ್ ಬನ್ಸಾಲಿ, ನಗರ ಪಾಲಿಕೆ ಸದಸ್ಯ ಮಂಜುನಾಥ್, ಎಸ್.ಬಿ.ಎಂ. ಮಂಜು, ಪಾರ್ಥಸಾರಥಿ, ಶಂಕರೇಗೌಡ, ದಿನೇಶ್‌ಗೌಡ, ಲಯನ್ ಸುರೇಶ್ ಗೋಲ್ಡ್ ಹಾಜರಿದ್ದರು.