ಬಾಗಲಕೋಟೆ: ಪತ್ರಿಕೋದ್ಯಮದಲ್ಲಿ ನೈಜತೆಯ ಯೋಚನೆ ಇಲ್ಲವಾಗಿದೆ. ಪತ್ರಿಕಾರಂಗದಲ್ಲಿ ಸೇವಾ ಮನೋಭಾವ ಇಲ್ಲವಾಗಿ ಉದ್ಯಮವಾಗಿ ಬೆಳೆದಿದೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಬಾಗಲಕೋಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರಲ್ಲಿ ಮೌಲ್ಯದ ಹೆಚ್ಚಿಸುವ ಕಾರ್ಯ ಅಲೋಚನೆ ಆಗಬೇಕು. ಪ್ರಸ್ತುತ ಸುದ್ದಿ ಪತ್ರಿಕೆ, ಪತ್ರಕರ್ತ ಒಳ್ಳೆಯದು, ಕೆಟ್ಟದ್ದು, ಸತ್ಯ-ಅಸತ್ಯ, ಸುದ್ದಿ ನೈಜತೆ ಅರಿಯಬೇಕಾಗಿದೆ. ಪತ್ರಕರ್ತರು ಕಂಪನಿ ಅಡಿಯಾಳಾಗಿ ಬುದ್ದಿವಂತಿಕೆ ಮಾರಾಟಮಾಡುತ್ತಾರೆ. ವಿನಃ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ . ಆದ್ದರಿಂದ ಪತ್ರಕರ್ತರ ಸಂಘಟನೆಯಲ್ಲಿ ಸಮಗ್ರ ಮೌಲ್ಯಗಳ ಚರ್ಚೆ ಆಗಬೇಕು ಎಂದು ತಿಳಿಸಿದರು.

ಕಾನಿಪ ಸಂಘದಿಂದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕೆ, ಪತ್ರಕರ್ತರನ್ನು ಅನುಮಾನ ನೋಡುವ ದೃಷ್ಟಿ ಎನ್ನವಂತಾಗಿದೆ. ಪ್ರಮಾಣಿಕ ಪತ್ರಕರ್ತರರೂ ಇದ್ದಾರೆ. ರೈತ ಚಳವಳಿ, ದಲಿತ ಚಳವಳಿ, ಬದ್ದತೆ ಇದ್ದಾರೆ. ಪತ್ರಕರ್ತ ಹೆಸರು ಹೇಳಿಕೊಂಡು ಅವಾಂತರ ಸೃಷ್ಟಿ ಆಗುತ್ತಿದ್ದೆ. ವೃತ್ತ ಬದ್ದತೆ, ಅವರ ದಂಧೆ ಮುಚ್ಚಿಕೊಳ್ಳುವ ರಕ್ಷಣೆ ಪಡೆದುಕೊಳ್ಲುವ ಪರಿಸ್ಥಿತಿ ಇದೆ. ಸುದ್ದಿ ಮನೆಯಲ್ಲಿ ವೃತ್ತಿ ಬದ್ಧತೆ ಇಲ್ಲದೇ ಹೋದಲೇ ಕಳೆದು ಕೊಳ್ಳುವ ಪರಿಸ್ಥಿತಿ ಇದೆ. ವಿಶ್ವಾಸ ,ನಂಬಿಕೆ ಸುದ್ದಿಮನೆಯಿಂದ ಸಮಾಜದಿಂಸ ಆಗಬೇಕು. ಕಣ್ಣೀರು ಒರೆಸುವ ,ನೊಂದವರ ದನಿ ಆಗದಿದ್ದವರು ಪತ್ರಕರ್ತ ರಾಗಲು ಅನರ್ಹರು ಎಂದರು. ಬರವಣಿಗೆ ಮೂಲಕ ಪತ್ರಕರ್ತ ಗುರುತಿಸಲ್ಪಡುವ ವೃತ್ತಿ ಪಾವಿತ್ರ್ಯಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಸಕ ಎಚ್.ವೈ.ಮೇಟಿ, ಜಿಲ್ಲಾಧಿಕಾರಿ ಜಾನಕಿ, ಜಿಪಂ ಸಿಇಒ ಶಶಿಧರ ಕುರೇರ, ಕಾನಿಪ ಜಿಲ್ಲಾಧ್ಯಕ್ಷ ಆನಂದ ಧಲಬಂಜನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಕಾರಕಾರಣಿ ಸದಸ್ಯರಾದ ಮಹೇಶ ಎಸ್. ಅಂಗಡಿ, ಕಾನಿಪ ಪ್ರಧಾನ ಕಾರ್ಯದರ್ಶಿ ಶಂಕರ್ ಕಲ್ಯಾಣಿ, ವಾರ್ತಾಧಿಕಾರಿ ಶ್ರೀಮತಿ ಕಸ್ತೂರಿ ಪಾಟೀಲ ಮತ್ತಿತರರು ಇದ್ದರು.