ದಾವಣಗೆರೆ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಅನುಭವದ ಕೊರತೆ ಇದೆ. ಹಾಗಾಗಿ, ರಾಜ್ಯಾಧ್ಯಕ್ಷರ ಬದಲಾವಣೆ ಆಗಲೇಬೇಕು. ಅವರ ಬದಲು ಹಿರಿಯರಾದ ಬಸವನಗೌಡ ಯತ್ನಾಳ್ ರಾಜ್ಯಾಧ್ಯಕ್ಷರಾಗಬೇಕು ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಒತ್ತಾಯಿಸಿದರು.
ಬಸವನಗೌಡ ಯತ್ನಾಳ್ ಅಂತವರು ರಾಜ್ಯಾಧ್ಯಕ್ಷರಾಗಬೇಕು, ಇಲ್ಲವೇ ವಿಪಕ್ಷ ನಾಯಕ ಆಗಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ವೈಫಲ್ಯದಿಂದ ೨೦೨೮ಕ್ಕೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆದರೆ, ಅದನ್ನು ನಡೆಸಿಕೊಂಡು ಹೋಗುವ ಸಾಮರ್ಥ್ಯ ವಿಜಯೇಂದ್ರಗೆ ಇಲ್ಲ. ಕಾಂಗ್ರೆಸ್ ವೈಫಲ್ಯ ಎತ್ತಿಹಿಡಿಯಲು ಹಾಗೂ ಎದುರಿಸಲು ಸಮರ್ಥ ನಾಯಕ ಬೇಕು ಎಂದರು. ಈವರೆಗೆ ವಿಜಯೇಂದ್ರ ಸಾಧನೆ ಶೂನ್ಯ. ಸದನದಲ್ಲಿ ಆಡಳಿತ ಪಕ್ಷದವರು ನಿಮ್ಮದು ಬಂಡವಾಳ ಬಿಚ್ಚಲಾ? ಎಂದರೆ ಸಾಕು ನೀವು ಹಿಂಬಾಗಿಲಿನಿಂದ ಓಡಿ ಹೋಗ್ತೀರಿ. ಅವರಿಗೆ ಉತ್ತರಿಸುವ ಕನಿಷ್ಠ ಧೈರ್ಯ ನಿಮಗಿಲ್ಲವೇ? ಎಂದು ಪ್ರಶ್ನಿಸಿದರು.