Friday, April 11, 2025
Google search engine

Homeರಾಜ್ಯಸುದ್ದಿಜಾಲಮಕ್ಕಳಲ್ಲಿ ಭಗವಂತನನ್ನು ಕಾಣುವ ಮೂಲಕ ಗೌರವ ಸಲ್ಲಿಸೋಣ- ಸುರೇಶ್ ಎನ್ಎಂ ಋಗ್ವೇದಿ

ಮಕ್ಕಳಲ್ಲಿ ಭಗವಂತನನ್ನು ಕಾಣುವ ಮೂಲಕ ಗೌರವ ಸಲ್ಲಿಸೋಣ- ಸುರೇಶ್ ಎನ್ಎಂ ಋಗ್ವೇದಿ

ಚಾಮರಾಜನಗರ: ತಾಲೂಕು ಅಮಚವಾಡಿ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ವಿದ್ಯಾರ್ಥಿ ಪ್ರತಿನಿಧಿ ಕುಮಾರಿ ಬೇಬಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿದ್ದ ಹಿರಿಯ ಉಪನ್ಯಾಸಕರಾದ ಮೂರ್ತಿ ಮಾತನಾಡಿ ಮಕ್ಕಳ ದಿನಾಚರಣೆ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರುರವರ ಜನ್ಮ ದಿನಾಚರಣೆಯ ಅಂಗವಾಗಿ ದೇಶದ ಎಲ್ಲೆಡೆ ಆಚರಿಸಲಾಗುತ್ತದೆ. ನೆಹರೂರವರು ಭಾರತದ ಅಭಿವೃದ್ಧಿಗೆ ಶಿಕ್ಷಣ ,ನೀರಾವರಿ ,ವಿಜ್ಞಾನ, ಬಡತನ ನಿರ್ಮೂಲನೆಗಾಗಿ ಅಪಾರ ಶ್ರಮ ಪಟ್ಟರು .ಅವರ ಜನ್ಮದಿನದ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸುವ ಮೂಲಕ ಮಕ್ಕಳ ವಿಕಾಸಕ್ಕೆ ಹಲವಾರು ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ ಎಂದರು.

ಇತಿಹಾಸ ಉಪನ್ಯಾಸಕರಾದ ಸುರೇಶ್ ಎನ್ಎಂ ಋಗ್ವೇದಿ ಮಾತನಾಡಿ ಮಕ್ಕಳು ದೇವರ ಸಮಾನ. ಮಕ್ಕಳಲ್ಲಿ ಮುಗ್ಧತೆ ,ಪ್ರೀತಿ, ಹಸನ್ಮುಖಿ ,ಕರುಣೆ, ವಾತ್ಸಲ್ಯ ಗುಣಗಳು ಇರುತ್ತವೆ. ಮಕ್ಕಳಲ್ಲಿ ಭಗವಂತನನ್ನು ಕಾಣುವ ಮೂಲಕ ಗೌರವ ಸಲ್ಲಿಸೋಣ. ಮಕ್ಕಳ ಬೆಳವಣಿಗೆಯಲ್ಲಿ ಅವರ ಸಾಧನೆಗೆ ನಿರಂತರವಾದ ಮಾರ್ಗದರ್ಶನವನ್ನು ನೀಡುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣವನ್ನು ಮಾಡಬೇಕು. ಮಕ್ಕಳ ಅಭಿವೃದ್ಧಿಯ ಮೂಲಕ ಸದೃಢ ರಾಷ್ಟ್ರವನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಅರ್ಥಶಾಸ್ತ್ರ ಉಪನ್ಯಾಸಕರಾದ ಬಸವಣ್ಣನವರು ಮಾತನಾಡಿ ಮಕ್ಕಳ ವಿಕಾಸಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ .ಮಕ್ಕಳ ಹಕ್ಕುಗಳ ಮೂಲಕ ಸಂರಕ್ಷಣೆ ಮಾಡಲಾಗುತ್ತಿದೆ ಎಂದರು.

ಕನ್ನಡ ಉಪನ್ಯಾಸಕರಾದ ರಮೇಶ್ ರವರು ಕುವೆಂಪು ಗೀತೆಗಳನ್ನು ಹಾಡಿ ರಂಜಿಸಿದರು. ಅಬ್ದುಲ್ ಕಲಾಮ್ ರವರ ಮಾತಿನಂತೆ ಮಕ್ಕಳು ಕನಸುಗಳನ್ನು ಕಟ್ಟಿಕೊಂಡು ಉನ್ನತ ಸಾಧನೆ ಮಾಡಬೇಕೆಂದರು.
ಪ್ರಾಚಾರ್ಯರಾದ ಶಿವನಂದಪ್ಪನವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಕ್ಕಳು ಮತ್ತು ವಿದ್ಯಾರ್ಥಿಗಳು ಉತ್ತಮವ್ಯಾಸಂಗ ಮಾಡುವ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಸ್ಪರ್ಧೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಸಾದ್, ಶ್ರೀನಿವಾಸ್, ರಾಧಾ, ಸಂಜನಾ,ಗೀತಾ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular