ಚಾಮರಾಜನಗರ: ಗ್ರಾಮೀಣ ಜನರಿಗೆ ಭಗವಂತನ ಸಂದೇಶವನ್ನು ತಲುಪಿಸುವ ಮೂಲಕ ವಿಶ್ವದ ನವ ನಿರ್ಮಾಣಕ್ಕೆ ನಾಂದಿ ಹಾಕೋಣ. ವಿಶ್ವದ ಜ್ಞಾನ ಜ್ಯೋತಿ ಬೆಳಗಿಸುವ ಮೂಲಕ ದೇವತಾ ಗುಣಗಳ ಚಿಂತನೆಗೆ ಅವಕಾಶ ಕಲ್ಪಿಸುವುದು ಆಧ್ಯಾತ್ಮಿಕ ಕೇಂದ್ರಗಳ ವೈಶಿಷ್ಟವಾಗಿದೆ ಎಂದು ಕೊಳ್ಳೇಗಾಲ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬಿಕೆ ಪ್ರಭಾಮಣಿಜಿ ತಿಳಿಸಿದರು.
ಅವರು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ತಾಲೋಕು ಮಸಗಾಪುರದಲ್ಲಿ ನೂತನವಾಗಿ ನಿರ್ಮಿಸಿರುವ ಸತ್ಯ ಗೀತಾ ಜ್ಞಾನ ಪಾಠ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡುತ್ತಾ ಸತ್ಯ ಗೀತಾ ಜ್ಞಾನ ಪಾಠಶಾಲೆ ನೂತನ ಕಟ್ಟಡವು ಧ್ಯಾನ ,ಯೋಗ ,ಸದ್ಭಾವದ ಮಂದಿರವಾಗಲಿ . ಜನರು ಸಂಪೂರ್ಣ ಸದುಪಯೋಗ ಪಡಿಸಿಕೊಂಡು ಆತ್ಮಜ್ಞಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಳ್ಳೋಣ ಎಂದು ತಿಳಿಸಿ, ನೂತನ ಕಟ್ಟಡದ ನಿರ್ಮಾಣಕ್ಕೆ ಸಹಕರಿಸಿದ ಸರ್ವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರ ಸಭೆಯ ಅಧ್ಯಕ್ಷರಾದ ಸುರೇಶ್ ನಾಯಕರವರು ಮಾತನಾಡಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವಿಶ್ವದ ಎಲ್ಲೆಡೆ ಶಾಂತಿ, ಸನ್ಮಾರ್ಗದ ಬೋಧನೆಯನ್ನು ಮಾಡುತ್ತಾ ಮಾನವನನ್ನು ಶ್ರೇಷ್ಠರನ್ನಾಗಿ ಮಾಡಲು ಕಾರ್ಯ ರೂಪಿಸುತ್ತಿದೆ. ಗ್ರಾಮೀಣ ಭಾಗದ ಹೊಸಗಾಪುರದಲ್ಲಿ ರೂಪಿಸಿರುವುದು ಬಹಳ ಸಂತೋಷವೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಸತ್ಯದ ಹಾದಿಯಲ್ಲಿ ಸಾಗಿ ಸತ್ಯ ಮತ್ತು ಪ್ರಾಮಾಣಿಕತೆಯ ಮೂಲಕ ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಪರ್ಕವನ್ನು ಪ್ರತಿಯೊಬ್ಬರು ಹೊಂದಿ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು . ಸತ್ಯವಂತರ ಹಾದಿ ಸ್ವಯಂ ಮೋಕ್ಷದ ಹಾದಿಯಾಗಿದೆ. ಸತ್ಯವು ಒಂದೇ ಆಗಿದ್ದು ತಿಳಿದವರು ವಿವಿಧ ರೀತಿಯಲ್ಲಿ ಬೋಧಿಸಿದ್ದಾರೆ. ಸತ್ಯಹರಿಶ್ಚಂದ್ರ, ಶ್ರೀರಾಮಚಂದ್ರ, ಸೀತಾದೇವಿ ಸತ್ಯ, ಪ್ರಾಮಾಣಿಕತೆಯ ಮೇರು ವ್ಯಕ್ತಿಗಳು. ಸತ್ಯ ಗೀತಾ ಜ್ಞಾನ ಶಾಲೆಯ .ಮಸಗಾಪುರ ದಲ್ಲಿ ನಿರ್ಮಿತವಾಗಿರುವುದು ಆಧ್ಯಾತ್ಮಿಕ ಕೇಂದ್ರಗಳು ಸಮಾಜದಲ್ಲಿ ಸಂತೋಷ ಮತ್ತು ನೆಮ್ಮದಿ ಸ್ಥಾಪಿಸುತ್ತದೆ. ರಾಕ್ಷಸ ಮನಸ್ಸಿನ ಗುಣಗಳನ್ನು ಪರಿವರ್ತಿಸಿ ಸದ್ಗುಣಗಳ ,ಸರ್ವರನ್ನು ಪ್ರೀತಿಸುವ ಗೌರವಿಸುವ ಭಾವನೆಯನ್ನು ಬೆಳೆಸುತ್ತದೆ. ಆಧ್ಯಾತ್ಮಿಕಶಕ್ತಿ ಕೇಂದ್ರಗಳು , ಮಠಗಳು ದೇವಾಲಯಗಳು, ಮಂದಿರಗಳು, ಗುರುಕುಲಗಳು ಭಾರತದಲ್ಲಿ ಸಾವಿರಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇಡೀ ವಿಶ್ವದಲ್ಲಿ ಸತ್ಯ ಪ್ರಾಮಾಣಿಕತೆ ಜ್ಞಾನದ ಪ್ರತೀಕವಾಗಿರುವುದೇ ಭಾರತೀಯರು ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ. ಇದಕ್ಕೆ ಕಾರಣ ಭಾರತ ಋಷಿ ಪರಂಪರೆಗಳ, ಸಂಸ್ಕೃತಿ, ಜ್ಞಾನ ಸನ್ಮಾರ್ಗದ ದಾರ್ಶನಿಕರು, ಚಿಂತಕರು ,ಜ್ಞಾನಿಗಳು, ಲಕ್ಷ ಸಂಖ್ಯೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಹೋದರಿಯರು ಕಾರಣವಾಗಿದ್ದಾರೆ ಎಂದು ತಿಳಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿ ಅವರು ಮಾತನಾಡಿ ಚಾಮರಾಜನಗರ ಜಿಲ್ಲೆಯಲ್ಲಿ ತಾಲೂಕು ಮತ್ತು ಹಳ್ಳಿಗಳಲ್ಲಿ ಪ್ರಜಾಪಿತ ಬ್ರಹ್ಮಕುಮಾರಿಯ ಕೇಂದ್ರಗಳು ಸ್ಥಾಪನೆಯಾಗಿತ್ತಿರುವುದು ಸಂತೋಷ ತಂದಿದೆ. ಆಧ್ಯಾತ್ಮಿಕ ಕೇಂದ್ರಗಳಲ್ಲಿ ಮನುಷ್ಯನ ಪರಿಪೂರ್ಣತೆಯನ್ನು ಸಹಜ ರಾಜ ಯೋಗದ ಅಭ್ಯಾಸದ ಮೂಲಕ ಶಾಂತಿ ನೆಮ್ಮದಿ ದೊರಕಲು ಕಾರಣವಾಗಿದೆ ಎಂದು ತಿಳಿಸಿ ನಾಗರಿಕರು ಸುತ್ತಮುತ್ತಲಿನ ಗ್ರಾಮದ ಜನರು ಈ ಆಧ್ಯಾತ್ಮಿಕ ಕೇಂದ್ರದ ಬೋಧನೆಗಳನ್ನು ಅರಿಯುವ ಪ್ರಯತ್ನವನ್ನು ಮಾಡಬೇಕು ಎಂದು ತಿಳಿಸಿದರು.
ಸತ್ಯ ಗೀತಾ ಜ್ಞಾನ ಮಂದಿರದ ನಿರ್ಮಾಣಕ್ಕೆ ಅನೇಕ ಜನರ ಕೊಡುಗೆಗಳನ್ನು ಸ್ಮರಿಸಿದರು.
ವೇದಿಕೆಯಲ್ಲಿ ಸಮಾಜ ಸೇವಕರಾದ ಪರಮೇಶ್ವರಪ್ಪ ಡಿಜೆ ಸುರೇಶ್, ಬಿಕೆ ಆರಾಧ್ಯ, ಮಹದೇವೇಗೌಡ ಮಂಜುನಾಥ್, ನಂದೀಶ್ ಪ್ರಮೀಳಾ, ಶಿವಕುಮಾರ್, ಶ್ರೀನಿವಾಸ್, ಶೆಟ್ಟಿ ಗ್ರಾಮ ಪಂಚಾಯತಿಯ ಸದಸ್ಯರು ದಾನಿಗಳು ನೂರಾರು ಸಂಖ್ಯೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಹೋದರಿಯರು ಭಾಗವಹಿಸಿದ್ದರು.
ಉದ್ಘಾಟನಾ ಸಮಾರಂಭದ ಅಂಗವಾಗಿ ಗ್ರಾಮದ ರಾಜಬೀ ದಿಗಳಲ್ಲಿ ನೂರಾರು ಸಂಖ್ಯೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಹೋದರಿಯರು ಮತ್ತು ನಾಗರಿಕರು ಶಾಂತಿ ಯಾತ್ರೆಯನ್ನು ನೆರವೇರಿಸಿದರು. ನಾಟ್ಯ ಕಲಾವಿದೆ ಅಕ್ಷತಾ ಜೈನ್ ರವರ ಶ್ರೀ ಸರಸ್ವತಿ ನಾಟ್ಯಕಲಾ ಸಂಸ್ಥೆಯ ಮಕ್ಕಳು ನೃತ್ಯರೂಪಕವನ್ನು ನೆರವೇರಿಸಿ ಗಮನ ಸೆಳೆದರು.