ಮಂಡ್ಯ: ಕೃಷಿ ಸಚಿವರ ವಿರುದ್ಧ ಅಧಿಕಾರಿಗಳಿಂದ ರಾಜ್ಯಪಾಲರಿಗೆ ಬರೆದಿರುವ ಲೆಟರ್ ನಕಲಿಯಾಗಿದೆ. ಅಧಿಕಾರಿಗಳು ಸಹ ನಾವು ಬರೆದಿಲ್ಲ ಅಂತಿದ್ದಾರೆ. ನಮ್ಮ ಪರವಾಗಿ ನಮ್ಮ ಕಾರ್ಯಕರ್ತರು ಇದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಪುತ್ರ ಸಚ್ಚಿನ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಮಾಡುವವರು ಯಾರು, ಕಿರುಕುಳ ಕೊಡ್ತಿರುವವರು ಯಾರು ಅಂತ ಮಂಡ್ಯ ಜಿಲ್ಲೆಯ ಜನರು ನಿರ್ಧಾರ ಮಾಡಬೇಕು ಎಂದು ಹೇಳಿದರು.
ಆರೋಪ ಕುರಿತು ತನಿಖೆಯಾಗಬೇಕು. ಕಾನೂನು ಕ್ರಮ ಕೈಗೊಳ್ಳಬೇಕು. ತನಿಖೆಯಾದ್ರೆ ಸತ್ಯಾಸತ್ಯತೆ ಹೊರ ಬರುತ್ತೆ ಎಂದರು.
ಚಲುವರಾಯಸ್ವಾಮಿ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಹೆಚ್ ಡಿ ಕುಮಾರಸ್ವಾಮಿ ಅವರ ತುಂಬಾ ದೊಡ್ಡವರು ಅವರ ಬಗ್ಗೆ ಮಾತನಾಡಲ್ಲ. ಒಂದು ಕಾಲದಲ್ಲಿ ತಂದೆ ರೀತಿ ನೊಡ್ಕೊಂಡಿದ್ದಾರೆ. ಅವರಿಗೆ ಹಾಗೂ ನಮ್ಮ ಅಪ್ಪ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.