ಮಂಡ್ಯ: KRS ಡ್ಯಾಂಗೆ 90 ವರ್ಷವಾದ ಹಿನ್ನೆಲೆಯಲ್ಲಿ ಡ್ಯಾಂ ಸುರಕ್ಷತೆ, ಸಾಮರ್ಥ್ಯದ ಬಗ್ಗೆ ಪರಿಶೀಲನೆಗೆ ಆಗ್ರಹಿಸಿ ಸರ್ಕಾರಕ್ಕೆ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಪತ್ರ ಬರೆದಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಡ್ಯಾಂಗೆ 90 ವರ್ಷ ತುಂಬಿದ ಹಿನ್ನೆಲೆ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು, ಶಾಸಕರ ಮನವಿಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ.
1911 ರಲ್ಲಿ ಆರಂಭವಾಗಿ 1931-32 ರಲ್ಲಿ ಕೆಆರ್ ಎಸ್ ಡ್ಯಾಂ ನಿರ್ಮಾಣದ ಕಾರ್ಯ ಪೂರ್ಣಗೊಂಡಿದೆ. ಈಗ 90 ವರ್ಷ ಪೂರ್ಣಗೊಂಡಿರೊ ಹಿನ್ನಲೆ ಶಾಸಕ ಬರೆದಿರುವ ಪತ್ರ ಮಹತ್ವ ಪಡೆದುಕೊಂಡಿದೆ.

ಪತ್ರದಲ್ಲಿರುವ ಪ್ರಮುಖ ಅಂಶಗಳು
ಡ್ಯಾಂ ನಲ್ಲಿ ಈಗಲೂ 49.50 tmc ನೀರು ಸಂಗ್ರಹ ಸಾಮರ್ಥ್ಯ ಇದಿಯಾ ಅಥವಾ ಹೂಳು ತುಂಬಿದೆಯಾ ಎಂಬುದನ್ನ ಪರಿಶೀಲಿಸಿ.
ಆಧುನಿಕ ತಂತ್ರಜ್ಞಾನದ ಮೂಲಕ ಡ್ಯಾಂ ಸುಭದ್ರಗೊಳಿಸಿ. ಏಕೆಂದರೆ ಆಗ ಹೈ ಡ್ಯಾಂ ತಂತ್ರಜ್ಞಾನ ಇರಲಿಲ್ಲ.
ಅಣೆಕಟ್ಟೆಯಲ್ಲಿ ಸೀಪೇಜ್ ನಿರ್ವಹಣೆ ಸರಿಯಾಗಿ ಆಗ್ತಿದಿಯಾ ಎಂಬುದನ್ನ ಪರಿಶೀಲಿಸಿ.
ಗೇಟ್ ಗಳ ಸುಸ್ಥಿತಿ ಬಗೆಗೆ ಪರಿಶೀಲನೆ ನಡೆಸಿ.
ಡ್ಯಾಂ ವ್ಯಾಪ್ತಿಯಲ್ಲಿ ಭೂಮಿ ಒತ್ತುವರಿ ಆಗಿದಿಯಾ ಪರಿಶೀಲಿಸಿ, ಒಂದು ವೇಳೆ ಒತ್ತುವರಿ ಆಗಿದ್ದರೆ ಅದನ್ನ ತೆರವು ಮಾಡಿಸಲು ಕ್ರಮ ಕೈಗೊಳ್ಳುವುದು.

ಶಾಸಕರ ಪತ್ರಕ್ಕೆ ಡಿಸಿಎಂ ಜೊತೆಗೆ ನೀರಾವರಿ ಸಚಿವರೂ ಆಗಿರೊ ಡಿಕೆ ಶಿವಕುಮಾರ್ ಒಪ್ಪಿಗೆ ಸೂಚಿಸಿದ್ದು, ಕೂಡಲೇ ತಜ್ಞರ ತಂಡ ಕಳುಹಿಸಿ ವರದಿ ನೀಡುವಂತೆ ತಿಳಿಸಿದ್ದಾರೆ.
ಮಂಡ್ಯದಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಈ ಕುರಿತು ಮಾತನಾಡಿ, ಕೆಆರ್ ಎಸ್ ನಮ್ಮ ಜೀವ,ಬದುಕು, ಉಸಿರು. ಒಂದೇ ಜಿಲ್ಲೆಗೆ ಮಾತ್ರವಲ್ಲ ಐದಾರು ಜಿಲ್ಲೆಗೆ ಕೆಆರ್ ಎಸ್ ಹೃದಯ. ಸಣ್ಣಪುಟ್ಟ ವ್ಯತ್ಯಾಸವಾಗದಿರಲು ಮುನ್ನೆಚ್ಚರಿಕೆ ಕ್ರಮಕ್ಕಾಗಿ ಪತ್ರ ಬರೆದಿದ್ದೇವೆ. ಸರ್ಕಾರ ಕೂಡ ಸ್ಪಂದಿಸಿ ಕಮಿಟಿ ಮಾಡಿದೆ. ಈಗಾಗಲೇ ಟೀಮ್ ಕೆಲಸ ಮಾಡಲು ರೆಡಿ ಇದ್ದಾರೆ. ಕೆಆರ್ ಎಸ್ ಡ್ಯಾಂ ಇನ್ನೂ 100 ವರ್ಷವಾದ್ರು ಏನು ಆಗಲ್ಲ. ಸಣ್ಣಪುಟ್ಟ ರಿಪೇರಿ ಮಾಡಿದ್ರೆ ಸರಿಹೋಗುತ್ತೆ ಅಂತ ಅಷ್ಟೇ. ಡ್ಯಾಂ ಸಂಪೂರ್ಣವಾಗಿ ಭದ್ರ ಇದೆ ಯಾವ ಬಿರುಕು ಕೂಡ ಇಲ್ಲ ಎಂದು ಹೇಳಿದ್ದಾರೆ.