Saturday, April 19, 2025
Google search engine

Homeರಾಜ್ಯಸುದ್ದಿಜಾಲಗ್ರಂಥಾಲಯಗಳು ಹಾಗೂ ಉತ್ತಮ ಆರೋಗ್ಯ ಎರಡು ಮನುಷ್ಯ ಜೀವನದ ಅವಿಭಾಜ್ಯ ಅಂಗ: ತೈಲೂರು ವೆಂಕಟಕೃಷ್ಣ

ಗ್ರಂಥಾಲಯಗಳು ಹಾಗೂ ಉತ್ತಮ ಆರೋಗ್ಯ ಎರಡು ಮನುಷ್ಯ ಜೀವನದ ಅವಿಭಾಜ್ಯ ಅಂಗ: ತೈಲೂರು ವೆಂಕಟಕೃಷ್ಣ

ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಶ್ರೀ ಬಿಜಿಎಸ್ ಗ್ರಂಥಾಲಯ ಉದ್ಘಾಟನೆ

ಮದ್ದೂರು: ಗ್ರಂಥಾಲಯಗಳು ಹಾಗೂ ಉತ್ತಮ ಆರೋಗ್ಯ ಎರಡು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ತಿಳಿಸಿದರು.

ಪಟ್ಟಣದ ಮದ್ದೂರು ಟೌನ್ ಕ್ಲಬ್ನಲ್ಲಿ ಆವರಣದಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಶ್ರೀ ಬಿಜಿಎಸ್ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಹೆಚ್ಚು ಮಗ್ನರಾಗಿ ಪುಸಕ್ತಗಳನ್ನು ಓದುವ ಅಭಿರುಚಿ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಉತ್ತಮ ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಸುವುದರ ಜತೆಗೆ ಮನಸಿಗೆ ಒಂದು ರೀತಿಯ ಸಮಾಧಾನ ಹಾಗೂ ನೆಮ್ಮದಿ ಸಿಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಹೆಚ್ಚೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮದ್ದೂರು ಟೌನ್ ಕ್ಲಬ್ಗೆ ತನ್ನದೆಯಾದ ಇತಿಹಾಸವಿದ್ದು, ಬಿಜಿಎಸ್ ಗ್ರಂಥಾಲಯ ಹಾಗೂ ಆರೋಗ್ಯ ಉಚಿತ ತಪಾಸಣೆ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿಯಾಗಿದ್ದು, ಮುಂದೆಯೂ ಇಂತಹ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಎಂದರು.

ಮದ್ದೂರು ಟೌನ್ ಕ್ಲಬ್ನ ಅಧ್ಯಕ್ಷ ಡಾ.ಬಿ.ಕೃಷ್ಣ ಮಾತನಾಡಿ, ಮದ್ದೂರು ಟೌನ್ ಕ್ಲಬ್ ವತಿಯಿಂದ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಕಟ್ಟಕಡೇಯ ವ್ಯಕ್ತಿಗಳಿಗೆ ಸಹಾಯ ಹಸ್ತ ಚಾಚುವುದೆ ನಮ್ಮ ಮುಖ್ಯ ಧ್ಯೇಯವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರೋಗ್ಯ ಶಿಬಿರದಲ್ಲಿ ಬಿ.ಪಿ., ಷುಗರ್, ಇಸಿಜಿ ಹಾಗೂ ಅವಶ್ಯಕತೆ ಇದ್ದವರಿಗೆ ಎಕೋ, ಕಣ್ಣಿನ ದೋಷ, ಮೂಳೆ ಸಮಸ್ಯೆ ಹಾಗೂ ಸ್ತ್ರೀ ರೋಗ ತಜ್ಞರಿಂದ ಉಚಿತಾ ತಪಾಸಣೆ ಮತ್ತು ಮಾರ್ಗದರ್ಶನದ ಜತೆಗೆ ಸಂಬಂಧಿಸಿದ ಖಾಯಿಲೆಗಳಿಗೆ ಉಚಿತವಾಗಿ ಔಷಧಿ ವಿತರಣೆ ಮಾಡಲಾಯಿತು. ಪಟ್ಟಣದ ಸೇರಿದಂತೆ ಅಕ್ಕ ಪಕ್ಕದ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಮುಖ್ಯ ಗ್ರಂಥಾಲಯಾಧಿಕಾರಿಗಳಾದ ಕೃಷ್ಣಮೂತರ್ಿ, ಟಿ.ಎಂ.ವಜ್ರಮುನಿ, ಡಾ.ಅಭಿಷೇಕ್, ಡಾ.ಕಾವ್ಯಶ್ರೀ, ಡಾ.ಸುಮಂತ್, ಮದ್ದೂರು ಟೌನ್ ಕ್ಲಬ್ನ ಅಧ್ಯಕ್ಷ ಡಾ.ಬಿ.ಕೃಷ್ಣ, ಗೌರವಾಧ್ಯಕ್ಷ ಚನ್ನಯ್ಯ, ಕಾರ್ಯದಶರ್ಿ ಎ.ದೊರೆಸ್ವಾಮಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ವೈರಮುಡಿ, ಕೆ.ಟಿ.ರಾಮಸ್ವಾಮಿ, ಎ.ರಾಮಚಂದ್ರು, ಎಂ.ಜಿ.ಶ್ರೀಕಂಠಯ್ಯ, ಪುಟ್ಟೇಗೌಡ, ಲಿಂಗೇಗೌಡ, ಸದಸ್ಯರಾದ ಎಂ.ಕೆ.ಪ್ರಭು, ಸತೀಶ್, ರಮೇಶ್, ಅಮರ್ದೇವರಾಜು, ಎಸ್.ಚಂದ್ರ, ಜಯಶಂಕರ್, ಸತೀಶ್, ಉಮೇಶ್ ಇದ್ದರು.

ಮದ್ದೂರು ಪಟ್ಟಣದ ಮದ್ದೂರು ಟೌನ್ ಕ ನಡೆದ ಸಭೆಯಲ್ಲಿ ಅಧ್ಯಕ್ಷ ಡಾ.ಕೃಷ್ಣ ಮಾತನಾಡಿದರು. ಎಂ.ಜಿ.ಶ್ರೀಕಂಠಯ್ಯ, ಪ್ರಭು, ರಮೇಶ್, ಚಂದ್ರು, ಶಿವಣ್ಣ, ಜಯಶಂಕರ್, ಸತೀಶ್, ಉಮೇಶ್ ಇದ್ದರು.

RELATED ARTICLES
- Advertisment -
Google search engine

Most Popular