Thursday, April 17, 2025
Google search engine

Homeರಾಜ್ಯಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಉದ್ದೇಶಕ್ಕಾಗಿ ಪ್ರತೀ ಶಾಲೆಯಲ್ಲಿ ಗ್ರಂಥಾಲಯ ಕಡ್ಡಾಯ!

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಉದ್ದೇಶಕ್ಕಾಗಿ ಪ್ರತೀ ಶಾಲೆಯಲ್ಲಿ ಗ್ರಂಥಾಲಯ ಕಡ್ಡಾಯ!

ಬೆಂಗಳೂರು: ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಉದ್ದೇಶಕ್ಕಾಗಿ “ಓದುವ ಹವ್ಯಾಸ ಜ್ಞಾನದ ವಿಕಾಸ’ ಎಂಬ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆರಂಭಿಸಿದ್ದು, ರಾಜ್ಯದಲ್ಲಿ 1ರಿಂದ 10ನೇ ತರಗತಿಯವರೆಗಿನ ಮಕ್ಕಳು ವಾರದಲ್ಲಿ ಒಂದು ಅವಧಿ ಗ್ರಂಥಾಲಯದಲ್ಲಿ ಕಳೆಯುವುದು ಮತ್ತು ಪ್ರತೀ ಶಾಲೆ ಗ್ರಂಥಾಲಯ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ.

ಮಕ್ಕಳ ಸ್ನೇಹಿ ಗ್ರಂಥಾಲಯ ಅಥವಾ ಓದುವ ಮೂಲೆ (ರೀಡಿಂಗ್‌ ಕಾರ್ನರ್‌) ಸ್ಥಾಪಿಸಲು ಒಂದು ಸ್ಥಳವನ್ನು ನಿಗದಿ ಪಡಿಸಬೇಕು. ಗ್ರಂಥಾಲಯದ ಅವಧಿ ಅಥವಾ ಯಾವುದೇ ಸಮಯದಲ್ಲಾಗಲಿ ಯಾವುದೇ ಅಡಚಣೆ ಇಲ್ಲದೆ ಸ್ವತಂತ್ರವಾಗಿ ಈ ಸ್ಥಳವನ್ನು ಮಕ್ಕಳು ಬಳಸುವಂತಿರಬೇಕು. ಇಲ್ಲಿ ಪುಸ್ತಕಗಳನ್ನು/ಓದುವ ಸಾಮಗ್ರಿಗಳನ್ನು ಕಪಾಟುಗಳಲ್ಲಿ ಮುಚ್ಚಿಡುವುದು ಅಥವಾ ಕೀಲಿ ಹಾಕಿಡುವುದು ಮಾಡಬಾರದು, ಪುಸ್ತಕಗಳನ್ನು ಮಕ್ಕಳ ಕೈಗೆಟಕುವಂತೆ ಇಡಬೇಕೆಂದು ಸರಕಾರ ಸೂಚಿಸಿದೆ.

ಗ್ರಂಥಾಲಯ ನಿರ್ವಹಣೆಯ ಜವಾಬ್ದಾರಿಯನ್ನು 1ರಿಂದ 3ನೇ ತರಗತಿ ವರೆಗೆ ನಲಿ ಕಲಿ ಶಿಕ್ಷಕರಿಗೆ ಮತ್ತು 4-10ನೇ ತರಗತಿಯವರೆಗೆ ಭಾಷಾ ಶಿಕ್ಷಕರಿಗೆ ನೀಡಬೇಕು. ಮಕ್ಕಳ ಗ್ರಂಥಾಲಯ ಓದು ಮತ್ತು ಮನೆಗೆ ಪುಸ್ತಕ ಕೊಂಡೊಯ್ದ ಬಗ್ಗೆ ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ.

ವಾರಕ್ಕೊಂದು ಅವಧಿ ಮೀಸಲು

ಪ್ರತೀ ತರಗತಿಗೆ ಕನಿಷ್ಠ ಪಕ್ಷ ವಾರಕ್ಕೊಂದು ಗ್ರಂಥಾಲಯದ ಅವಧಿ ಯನ್ನು ನಿಗದಿ ಪಡಿಸಬೇಕು. 1ರಿಂದ 3ನೇ ತರಗತಿ ಮಕ್ಕಳಿಗೆ ಶುಕ್ರವಾರ ಸಂಜೆ 3.10ರಿಂದ 3.40ರ ವರೆಗೆ, 4ನೇ ತರಗತಿಗೆ ಸೋಮವಾರ ಸಂಜೆ 3.50ರಿಂದ 4.30, 5ನೇ ತರಗತಿಗೆ ಸಂಜೆ 3.50ರಿಂದ 4.30ರ ವರೆಗೆ, 6ರಿಂದ 8ನೇ ತರಗತಿ ವರೆಗೆ ಗುರುವಾರ ಸಂಜೆ 3.50ರಿಂದ 4.30ರ ವರೆಗೆ ಮತ್ತು 9ರಿಂದ 10ನೇ ತರಗತಿ ಮಕ್ಕಳಿಗೆ ಮಂಗಳವಾರ 3.50ರಿಂದ 4.30ರ ವರೆಗೆ ಗ್ರಂಥಾಲಯ ಅವಧಿಯನ್ನು ನಿಗದಿ ಪಡಿಸಲಾಗಿದೆ.

RELATED ARTICLES
- Advertisment -
Google search engine

Most Popular