Friday, April 18, 2025
Google search engine

Homeರಾಜ್ಯಸುದ್ದಿಜಾಲಪರಿಪೂರ್ಣ ಶ್ರದ್ಧೆ, ನಿಷ್ಠೆ ಇದ್ದರೆ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯ- ಜ್ಞಾನ ಪ್ರಕಾಶ ಸ್ವಾಮಿಜೀ

ಪರಿಪೂರ್ಣ ಶ್ರದ್ಧೆ, ನಿಷ್ಠೆ ಇದ್ದರೆ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯ- ಜ್ಞಾನ ಪ್ರಕಾಶ ಸ್ವಾಮಿಜೀ

ಹೊಸೂರು : ಜೀತಗಾರ ಮಕ್ಕಳು ಜೀತ ಮಾಡಬೇಕು ಎಂಬುದು ಕೆಲವರದ್ದು ಆದರೆ ಜೀತಗಾರ ಮಕ್ಕಳು ಕೂಡ ದೊಡ್ಡ ಉದ್ಯಮಿಗಳು ಆಗಬೇಕೆಂಬುದು ಡಾ.ಬಿ.ಅರ್.ಅಂಭೇಡ್ಕರ್ ಸಂವಿಧಾನ ಹೇಳಿದೆ ಎಂದು ಉರಿಲಿಂಗ ಪೆದ್ದೀಶ್ವರ ಮಠದ ಜ್ಞಾನ ಪ್ರಕಾಶಸ್ವಾಮಿಜೀ ಹೇಳಿದರು. ಅವರು ಭೇರ್ಯ ಗ್ರಾಮದ ಎ.ಟಿ.ಎಸ್. ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭವಾದ ಸುದೀಕ್ಷ ಆಗ್ರೋ ಸೆಂಟರ್ ನ್ನು ಉದ್ಘಾಟಿಸಿ ಮಾತನಾಡಿದರು.

ಪರಿಶಿಷ್ಟರ ಮಕ್ಕಳು ಉದ್ಯೋಗ ಮಾಡಲೆಂದೇ ಕಡಕೊಳ ಬಳಿ ಒಂದೂವರೆ ಎಕರೆ ಪ್ರದೇಶದಲ್ಲಿ ಡಾ
ಬಿ.ಆರ್.ಅಂಭೇಡ್ಕರ್ ಇಂಡಸ್ಟ್ರಿಯಲ್ ಪ್ರದೇಶ ಎಂದು ಮಾಡಲಾಗಿದೆ ಎಂದ ಸ್ವಾಮೀಜಿ ೧೮೦೦ ಪರಿಶಿಷ್ಟರ ಜನರಿಗೆ ಒಂದರಿಂದ ಆರು ಕೋಟಿ ವರೆಗೆ ಪರಿಶಿಷ್ಟರ ನಿಗಮದಿಂದ ಸಾಲ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು. ಪರಿಶಿಷ್ಟರಿಗೆ ಸ್ವಾಭಿಮಾನ ಇಲ್ಲ ಎಂದರೆ ಬದುಕು ಕಟ್ಟಿ ಕೊಳ್ಳಲು ಸಾಧ್ಯವಿಲ್ಲ, ಬಡವರು ಬಡವರಾಗಿ ಸಾಯೋದು ಅವರದೆ ತಪ್ಪು ಆದರೆ ಅಂಭೇಡ್ಕರ್ ಸಂವಿಧಾನ ಹೇಳಿದ್ದು ಬಡವರು ಏಕೆ ಸಾಯಬೇಕು, ಸಾಯುವ ಬದಲು ಬದಕು ಕಟ್ಟಿ ಕೊಳ್ಳಲು ನೀವು ಹೋಗ ಬೇಕಾದ ದಾರಿ ಪರಿಪೂರ್ಣ ಶ್ರದ್ಧೆ, ನಿಷ್ಠೆಯಿಂದ ಇದ್ದರೆ ಮಾತ್ರ ಸಾಧ್ಯ ಎಂದರು.

ದೇಶದಲ್ಲಿ ಬ್ಯಾಂಕಿನ ವ್ಯವಸ್ಥೆ ಕಲ್ಪಿಸಿದ್ದು ಡಾ ಬಿ.ಆರ್. ಅಂಭೇಡ್ಕರ್ , ಏಪ್ರಿಲ್ ೧ ರಂದು ರಿಸರ್ವ್ ಬ್ಯಾಂಕ್ ಸ್ಥಾಪನೆ ಮಾಡಿದ ದಿನದ ಆದರೆ ಅದನ್ನು ಕೆಲ ಬಲಿಷ್ಟರು ಏಪ್ರಿಲ್ ೧ ರಂದು ಏಪ್ರಿಲ್ ಫೂಲ್ ಮಾಡಿದರು ಆದರೆ ಎಲ್ಲವೂ ಬದಲಾವಣೆ ಆಗಿದೆ, ನೀವು ಕೂಡ ಬದಲಾವಣೆ ಆಗಿ, ದೊಡ್ಡ ಮಟ್ಟದಲ್ಲಿ ಬೆಳೆಯಿರಿ ಎಂದು ಸ್ವಾಮೀಜಿ ಅವರು ಅಬಕಾರಿ ಇಲಾಖೆ, ಹಾಪ್ ಕಾಮ್ಸ್ ಸೇರಿದಂತೆ ವಿವಿದ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರು ಉದ್ಯಮ ಸ್ಥಾಪಿಸಲು ಮೀಸಲಾತಿ ಕಲ್ಪಿಸಲಾಗಿದೆ ಇದರ ಸದ್ಬಳಕೆ ಮಾಡಿ ಕೊಳ್ಳಿ ಎಂದು ತಿಳಿಸಿದರು.

ಭೇರ್ಯ ಗ್ರಾಮದ ಭಾಗದಲ್ಲಿ ರೈತರಿಗೆ ಬೇಕಾದ ಉಪಕರಣ ಯಂತ್ರಗಳನ್ನು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮೂಲಕ ಮಾರಾಟ ಮಾಡಲು ಸುದೀಕ್ಷ ಆಗ್ರೋ ಸೆಂಟರ್ ಪ್ರಾರಂಭಿಸಿರುವುದು ಶ್ಲಾಘನೀಯ ಎಂದು ಮಾಲೀಕ ಗೇರದಡ ಸುನೀಲ್ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಭೂಮಿ ಆಗ್ರೋ ಎಂಟರ್ ಪ್ರೈಸಸ್ ವ್ಯವಸ್ಥಾಪಕ ಹೃದಯ್, ಕಾಂಗ್ರೆಸ್ ಹಿರಿಯ ಮುಖಂಡ ಸನ್ಯಾಸಿಪುರ ಮಂಜುರಾಜ್, ತಾ.ಶರಣು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಪಿ.ರಮೇಶ್, ಕಾಂಗ್ರೆಸ್ ಯುವ ಮುಖಂಡ ಬಿ.ಟಿ.ಮೋಹನ್ ಕುಮಾರ್, ನಂದೀಶ್, ಗ್ರಾ.ಪ.ಸದಸ್ಯ ಹರಂಬಳ್ಳಿ ಶೇಖರ್, ಟೆಲಿಪೊನ್ ಈರಯ್ಯ, ನಿವೃತ್ತ ಶಿಕ್ಷಕರಾದ ರಾಜಯ್ಯ, ದೇವರಾಜ್, ಮೂಲೇಪೆಟ್ಲು ಗುರು, ಗೇರದಡ ಪ್ರಕಾಶ್, ಹಂಪಾಪುರ ಮಹದೇವ್, ಕೋಳಿಕುಮಾರ್, ನಂಜೇಗೌಡ, ಅರುಣ, ಟಿ.ಸಿ.ಮಂಜು, ಗೇರದಡ ಮಹೇಶ್ ಸೇರಿದಂತೆ ಅನೇಕರು ಇದ್ಗರು.

RELATED ARTICLES
- Advertisment -
Google search engine

Most Popular