Friday, April 11, 2025
Google search engine

Homeಸ್ಥಳೀಯಕೊಳಕು ಹಾಸಿಗೆ ಹರಿದ ಚಾಪೆಯಲ್ಲಿ ವಿದ್ಯಾರ್ಥಿಗಳ ಬದುಕು...!

ಕೊಳಕು ಹಾಸಿಗೆ ಹರಿದ ಚಾಪೆಯಲ್ಲಿ ವಿದ್ಯಾರ್ಥಿಗಳ ಬದುಕು…!

ಅಗಾಧವಾಗಿ ಬೆಳೆದು ನಿಂತಿರುವ ಬೇಲಿ ಪೊದೆಯ ಮಧ್ಯೆ ವಸತಿ ನಿಲಯ: ಅವ್ಯವಸ್ಥೆಯ ಆಗರವಾದ ಕಸ್ತೂರ ಬಾ ಗಾಂಧಿ ಬಾಲಿಕಾ ವಿದ್ಯಾಲಯದ ವಸತಿ ನಿಲಯ

ಶಾಸಕರೇ ಜಡ್ಡು ಗಟ್ಟಿದ ಅಧಿಕಾರಿಗಳ ಸರ್ಜರಿ ಯಾವಾಗ…?

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ಎಂದ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳ ತವರು  ಕ್ಷೇತ್ರ  ಎನ್ನುತ್ತೇವೆ  ಕ್ಷೇತ್ರದ ಅಭಿವೃದ್ಧಿಯ ಹೆಸರಿನಲ್ಲಿ ಸಾಕಷ್ಟು ಅನುದಾನಗಳು ಬಿಡುಗಡೆಯಾಗುವುದು ಎಂದು ಕ್ಷೇತ್ರದ ಜನರ ಅಪಾರ ನಂಬಿಕೆ ಅದು ಬರಿ ಹುಸಿ ಎನ್ನುವುದಕ್ಕೆ ಬಡ ಮಕ್ಕಳ ವಿದ್ಯಾಭ್ಯಾಸ ಮಾಡುವ ವಸತಿ ನಿಲಯದ ಸ್ಥಿತಿ ನೋಡಿದರೆ ಖಂಡಿತವಾಗಿಯೂ ತಿಳಿಯುತ್ತದೆ.

ನಿಮಗೆ ಜನನಾಯಕರ ಪೋಳ್ಳು  ಭರವಸೆ ಹಾಗಾದ್ರೆ ತಡ ಯಾಕೆ ಕೇಳಿ ವಸತಿ ನಿಲಯದ ಬಾಲಕಿಯರ ಗೋಳಾ…! ಹರಿದ ಚಾಪೆ, ಗಬ್ಬೆದು ನಾರುತ್ತಿರುವ  ಕೊಳಕು ಹಾಸಿಗೆ,, ಅಗಾಧವಾಗಿ ಬೆಳೆದು ನಿಂತಿರುವ ಬೇಲಿಯ ಪೊದೆ  ತರಗತಿಗೆ ತೆರಳಿ ಪಾಠ ಪ್ರವಚನ ಮುಗಿಸಿ, ವಸತಿ ನಿಲಯದ ಒಳಗೆ ತೆರಳಿದರೆ ಬೆಳಗಾಗುವುದರ ಒಳಗೆ ಭಯ … ಆತಂಕ…! ಹೆಸರಿಗೆ ಬಾಲಕಿಯರ ವಸತಿ ನಿಲಯ ದುರಂತ ಯಾವುದೇ ರಕ್ಷಣೆ ಇಲ್ಲವೇ ಇಲ್ಲ ಹಾಗಾದ್ರೆ ಈ ವಸತಿ ನಿಲಯ ಇರುವುದು ಎಲ್ಲಿ ಅಂತೀರಾ…!

ರಾಜ್ಯದ ದೊರೆ ವರುಣ ವಿಧಾನಸಭಾ ಕ್ಷೇತ್ರದ ಅಚ್ಚುಮೆಚ್ಚಿನ ಜನನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ತವರು ಮೈಸೂರು ಜಿಲ್ಲೆಯ ನಂಜನಗೂಡು ನಗರದ ಹುಲ್ಲಹಳ್ಳಿ ಮುಖ್ಯರಸ್ತೆಯಲ್ಲಿರುವ ದೇಬೂರು ಗ್ರಾಮದ ಕಸ್ತೂರ ಬಾ ಗಾಂಧಿ ಬಾಲಿಕಾ ವಿದ್ಯಾಲಯದ ವಸತಿ ನಿಲಯ ಸಮಸ್ಯೆಗಳ ತಾಣವಾಗಿ ಬಾಲಕಿಯರಿಗೆ ಸೂಕ್ತ ರಕ್ಷಣೆ ಇಲ್ಲದೆ ಭಯ ಮತ್ತು ಆತಂಕ ಸೃಷ್ಟಿಸುವ ಸ್ಮಶಾನದಂತಿದೆ.

ದಕ್ಷಿಣ ಕಾಶಿ ನಂಜನಗೂಡು ಪಟ್ಟಣದ ತಾಲ್ಲೂಕು ಕೇಂದ್ರದ ವಸತಿ ನಿಲಯ‌ ಅವ್ಯವಸ್ಥೆಯ ಆಗರವಾಗಿದೆ. ಸರ್ಕಾರದ ಸವಲತ್ತುಗಳು ವಿದ್ಯಾರ್ಥಿನಿಯರಿಗೆ ತಲುಪುತ್ತಿಲ್ಲ. ಅವ್ಯವಸ್ಥೆಯಲ್ಲೇ ವಿದ್ಯಾರ್ಥಿನಿಯರು ದಿನ ದೂಡುತ್ತಿದ್ದಾರೆ.

9 ಮತ್ತು 10ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗಾಗಿ ಮೀಸಲಾದ ಈ ವಸತಿ ಶಾಲೆಯಲ್ಲಿ ಕಳೆದ ವರ್ಷ 30 ವಿದ್ಯಾರ್ಥಿಗಳ ಹಾಜರಾತಿ ಇದ್ದು ಪ್ರಸಕ್ತ ವರ್ಷದಲ್ಲಿಯೂ ಕೂಡ ಹಾಜರಾತಿ ಇಳಿಮುಖವಾಗಿದೆ. ವಸತಿ ನಿಲಯದ ಒಳಭಾಗದಲ್ಲಿ ಬಾಲಕಿಯರು ಬಟ್ಟೆ ಹೊಗೆಯಲು ಸ್ಥಳವಿಲ್ಲದೆ ಹೊರ ಭಾಗದ ನಾಲೆ ಸಮೀಪದಲ್ಲಿ ಬಟ್ಟೆಗಳನ್ನು ಶುಚಿಗೊಳಿಸಬೇಕು. 

ಮಳೆಗಾಲ ಬಂದ್ರೆ ಸೋರುವ ಕೊಠಡಿಗಳು. ಬಾಗಿಲು ಭದ್ರ ಪಡಿಸಲು ಚಿಲಕಗಳಿಲ್ಲ. ವಸತಿ ಶಾಲೆಯ ಸುತ್ತ ಕಾಂಪೌಂಡ್ ವ್ಯವಸ್ತೆ ಇಲ್ಲ. ಸಿಸಿ ಕ್ಯಾಮೆರಗಳಂತೂ ಇಲ್ಲವೆ ಇಲ್ಲ. ಗೋಡೆಯಿಂದ ಹೊರಬಂದು ಜೋತಾಡುವ ವಿದ್ಯುತ್ ಸ್ವಿಚ್ ಬೋರ್ಡ್ ಗಳು. ಸ್ವಚ್ಛತೆ ಇಲ್ಲಿ ಮರೀಚಿಕೆಯಾಗಿದೆ.

ಶಾಲೆ ಆರಂಭಗೊಂಡು ಬರೋಬರಿ ಮೂರು  ತಿಂಗಳು ಕಳೆದರೂ ನೋಟ್ ಪುಸ್ತಕ ಬ್ಯಾಗ್ ವಿತರಿಸಿಲ್ಲ. ಕೆಲ ವರ್ಷಗಳ ಹಿಂದೆ ನೀಡಿದ್ದ ಕೊಳಕು ಹಾಸಿಗೆಗಳೇ ವಿದ್ಯಾರ್ಥಿನಿಯರಿಗೆ ಆಸರೆಯಾಗಿದೆ. ಅವ್ಯವಸ್ಥೆಗಳನ್ನು ಕೂಡಲೆ ಸರಿಪಡಿಸದಿದ್ದಲ್ಲಿ ಮುಂದಿನ ವರ್ಷ ಮಕ್ಕಳನ್ನು ದಾಖಲಿಸಲ್ಲ ಎಂದು ಪೋಷಕರು ನಿರ್ಧರಿಸಿದ್ದಾರೆ. ಶಿಕ್ಷಣ ಇಲಾಖೆ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯದ ದುಃಸ್ಥಿತಿಯನ್ನು ಕೇಳುವವರೇ ಇಲ್ಲದಂತಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಾರ್ಯವೈಖರಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ.

ಬೇಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿರುವ ವಸತಿ ಶಾಲೆಯ ಮುಖ್ಯ ಶಿಕ್ಷಕರು, ಹಾಗೂ  ನಿಲಯ ಪಾಲಕರನ್ನು ಈ ಕೂಡಲೇ ಅಮಾನತು ಮಾಡಿ ಶಿಸ್ತುಕ್ರಮ ಜರಗಿಸುವವರೇ ಕಾದುನೋಡಬೇಕಿದೆ.

RELATED ARTICLES
- Advertisment -
Google search engine

Most Popular