ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ದೇಶದ ಬೆಳವಣಿಗೆಗೆ ಅಕ್ಷರ ಮತ್ತು ಆರೋಗ್ಯ ಅತ್ಯಂತ ಪ್ರಮುಖವಾಗಿದ್ದು ಅ ಎರಡನ್ನು ಸಾಧಿಸಲು ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯವಾಗಿದ್ದು ಇದನ್ನು ಕಾಲೇಜು ವಿದ್ಯಾರ್ಥಿಗಳು ಅರಿತು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಅರ್.ನಗರ ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ೨೦೨೪-೨೫ನೇ ಸಾಲಿನ ಸಾಂಸ್ಕೃತಿಕ ಮತ್ತು ವಿವಿಧ ಸಮಿತಿಗಳ ಸಮಾರೋಪ ಸಮಾರಂಭ ಹಾಗೂ ಜಾನಪದ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಮಾಡಲು ೧ ಕೋಟಿ ರೂ ಅನುದಾನ ನೀಡಲಾಗಿದೆ ಎಂದರು.
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೂ ತಲಾ ೮ ಕೋಟಿ ರೂ ನೀಡಿದ್ದು ಆ ಹಣವನ್ನು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ನೀಡುವುದಾಗಿ ಹೇಳಿದ ಶಾಸಕರು ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ರಂಗಮಂಟಪ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ವಿದ್ಯಾರ್ಥಿಗಳು ಅಂಕಗಳಿಕೆಗೆ ಆದ್ಯತೆ ನೀಡುವುದರ ಜತೆಗೆ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದ ಶಾಸಕ ಡಿ.ರವಿಶಂಕರ್ ಹೆಣ್ಣು ಮಕ್ಕಳು ಉನ್ನತ್ತ ಶಿಕ್ಷಣ ಪಡೆಯುವುದರ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸನ್ನದ್ದರಾಗಬೇಕು ಎಂದು ಸೂಚಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ಅವಶ್ಯಕವಿರುವ ಅನುದಾನ ಕೊಡಿಸಲು ನಾನು ಬದ್ದನಾಗಿದ್ದು ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾದಂತೆ ನೋಡಿಕೊಳ್ಳಬೇಕಾದದ್ದು ಕಾಲೇಜು ಸಿಬ್ಬಂದಿ ವರ್ಗದ ಕರ್ತವ್ಯವಾಗಿದ್ದು ಪ್ರಾಂಶುಪಾಲರು ಮೂಲಭೂತ ಸೌಕರ್ಯ ಕಿಂಚ್ಚಿತ್ತು ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಬೇಕೆಂದು ತಾಕೀತು ಮಾಡಿದರು.
ಅಂತರ ರಾಷ್ಟ್ರೀಯ ಜಾನಪದ ಗಾಯಕರಾದ ರಾಮಚಂದ್ರ ಪ್ರಧಾನ ಭಾಷಣ ಮಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ವೈ.ಎಸ್.ಜಯಂತ್, ಪ್ರಾಂಶುಪಾಲ ಬಿ.ಟಿ.ವಿಜಯ್ ಮಾತನಾಡಿದರು.
ಸದಸ್ಯರಾದ ಸಂಪತ್ತೇಗೌಡ, ಕೆ.ಚಂದ್ರು, ಸುಧಾಕರ್, ಸಾಕರಾಜು, ಕಾಂಗ್ರೆಸ್ ವಕ್ತಾರ ಸೈಯದ್‌ಜಾಬೀರ್, ಉಪನ್ಯಾಸಕರಾದ ಪ್ರಶಾಂತ್.ಪಿ.ಅಡಗೂರು, ಡಾ.ಬಿ.ವಿ.ಗಣೇಶ್, ,ಡಾ.ಕಿರಣ್‌ಕುಮಾರ್, ಡಾ.ಎಸ್.ಶಂಕರ್, ಡಾ.ದೀಪುಕುಮಾರ್, ಡಾ.ರೇಣುಕ, ವಿದ್ಯಾರ್ಥಿ ಸಂಘದ ಅಧ?ಯಕ್ಷೆ ಆರ್.ಚೈತ್ರ, ಕಾರ್ಯದರ್ಶಿಗಳಾದ ಹೆಚ್.ಎಸ್.ರೀತು, ಪವಿತ್ರ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.