ಹನೂರು : ಪೊನ್ನಾಚಿ ಗ್ರಾಮದ ಮೇಗನೂರು ಬಡಾವಣೆಯ ಕಬ್ಬಾಳ ಎಂಬುವವರಿಗೆ ಸೇರಿರುವ ಆರು ಮೇಕೆಗಳು ಹಾಗೂ ಒಂದು ಹೆಮ್ಮೆ ಕರು ಚಿರತೆ ದಾಳಿಗೆ ಬಲಿಯಾಗಿವೆ. ಕಳೆದ ಮೂರು ನಾಲ್ಕು ದಿನದಿಂದ ಚಿರತೆ ದಾಳಿ ಮಾಡುತ್ತಿದ್ದು ಬಡ ಕಬ್ಬಾಳನಿಗೆ ತನ್ನೆಲ್ಲ ಜಾನುವಾರುಗಳನ್ನು ಕಳೆದುಕೊಂಡು ಅನಾಥ ಪ್ರಜ್ಞೆ ಕಾಡುತ್ತಿದೆ.
ಈ ಸಂಬಂಧವಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅಲ್ಲದೆ ಪೊನ್ನಾಚಿ ಗ್ರಾಮದ ಸುತ್ತಮುತ್ತ ಒಂದೆಡೆ ಕಾಡಾನೆ ರೈತರ ಬೆಳೆಗಳನ್ನು ನಾಶ ಮಾಡುತ್ತಾ ಇರುವುದು ಸುಮಾರು ಎರಡು ಮೂರು ವರ್ಷಗಳಿಂದ ನಡೆಯುತ್ತಲೇ ಇದೆ. ಇದೀಗ ಚಿರತೆ ದಾಳಿಗೆ ಜಾನುವಾರುಗಳು ಬಲಿಯಾಗುತ್ತಿರುವುದು ರೈತರ ದುರ್ದೈವ. ಆದ್ದರಿಂದ ಅರಣ್ಯ ಇಲಾಖೆಯವರು ಕೂಡಲೇ ಕಾಡಾನೆ ಮತ್ತು ಚಿರತೆಯನ್ನು ಹಿಡಿದು ಬೇರೆಡೆ ಸ್ಥಳಾoತರ ಮಾಡಿ, ರೈತರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವಂತೆ ಮನವಿ ಮಾಡಲಾಗುತ್ತಿದೆ.