ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಲೂಕಿನ ಹೆಬ್ಬಾಳು ಕೃಷಿ ಪತ್ತಿನ ಸಹಕಾರ ಸಂಘ ೨.೮೦ ಲಕ್ಷ ಲಾಭಗಳಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಲಾಭ ಗಳಿಸಲು ಸಂಘದ ಆಡಳಿತ ಮಂಡಳಿ ಶ್ರಮಿಸಲಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಹೆಚ್.ನಾಗೇಂದ್ರ ಸoಘದ ಆಡಳಿತ ಕಛೇರಿಯಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘದ ವ್ಯಾಪ್ತಿಯಲ್ಲಿ ೯೦ ಮಹಿಳಾ ಸ್ವ-ಸಹಾಯ ಸಂಘಗಳು ರಚನೆಯಾಗಿದ್ದು, ಸಂಘಗಳ ಆರ್ಥಿಕ ಅಭಿವೃದ್ದಿಗೆ ನಮ್ಮ ಸಂಘದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದರು.
ಗ್ರಾಮೀಣ ಜನತೆಯಲ್ಲಿ ಆರ್ಥಿಕ ಸುಧಾರಣೆ ತರುವ ದೃಷ್ಟಿಯಿಂದ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ
ಸೌಲಭ್ಯ ನೀಡುತ್ತಿರುವುದಾಗಿ ಮಾಹಿತಿ ನೀಡಿದ ಅಧ್ಯಕ್ಷರು ಸಂಘವನ್ನು ಲಾಭದತ್ತ ಕೊಂಡ್ಯೂಯುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದು ಹೇಳಿದರು.
ಸಂಘದ ವತಿಯಿಂದ ವಿವಿಧ ಯೋಜನೆಯಡಿಯಲ್ಲಿ ರೈತ ಸದಸ್ಯರುಗಳಿಗೆ ೫ ಕೋಟಿ ರೂ ಸಾಲ ನೀಡಲು
ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದ್ದು ಹೊಸ ರೈತ ಸದಸ್ಯರಿಗೂ ಸಾಲ ನೀಡಲು ತೀರ್ಮಾನಿಸಿರುವುದರಿಂದ ಅರ್ಹರು ಅಗತ್ಯ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬೇಕೆಂದು ಮನವಿ
ಮಾಡಿದರು.
ಸಂಘದ ವ್ಯಾಪ್ತಿಗೆ ಒಳಪಡುವ ಹೆಬ್ಬಾಳು, ಚರ‍್ನಹಳ್ಳಿ, ಹೆಬ್ಬಾಳು ಕೊಪ್ಪಲು, ಕಾಟ್ನಾಳು, ಹೆಬ್ಬಾಳು ಬಡಾವಣೆ, ಚಂದಗಾಲು ಗ್ರಾಮಗಳಿಂದ ೧೩೬೭ ಮಂದಿ ಷೇರುದಾರ ಸದಸ್ಯರಿದ್ದಾರೆ ಎಂದು ತಿಳಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಎಸ್.ಚಂದ್ರಶೇಖರ್ ವಾರ್ಷಿಕ ವರದಿ ಓದಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಿ.ಎಂ.ರಾಜೇಶ್, ನಿರ್ದೇಶಕರಾದ ಸಿ.ಆರ್.ಶಿವಪ್ರಕಾಶ್, ರಾಮಚಂದ್ರನಾಯಕ, ಹೆಚ್.ಕೆ.ಧನಂಜಯ, ಎನ್.ಪಿ.ಪ್ರಸನ್ನ, ಹೆಚ್.ಕೆ.ಮಂಜುನಾಥ್, ರವಿ, ಹೆಚ್.ಎಸ್.ರವಿಕುಮಾರ್, ಶಶಿಕಲಾ, ರೂಪ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಉಮೇಶ್, ಸಿಬ್ಬಂದಿಗಳಾದ ಎಂ.ಪಿ.ಉದಯಕುಮಾರ್, ಡಿ.ಕೆ.ಪುನೀತ್ ಸೇರಿದಂತೆ ಷೇರುದಾರ ರೈತ ಸದಸ್ಯರುಗಳು ಹಾಜರಿದ್ದರು.