ರಾಮನಗರ: ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯ ಗೊಟ್ಟಿಗೆ ಹಳ್ಳಿಯಲ್ಲಿ ಜಂಗಲ್ ಟ್ರೈಲ್ ರೆಸಾರ್ಟ್‌ನ ಮಾಲೀಕರು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಥವಾ ಬೆಂಗಳೂರಿನ ಕೇಂದ್ರ ಕಚೇರಿಯ ಪ್ರವಾಸೋದ್ಯಮ ಇಲಾಖೆಯಲ್ಲಿ ರೆಸಾರ್ಟ್ ನಡೆಸುತ್ತಿರುವ ಬಗ್ಗೆ ಯಾವುದೇ ಅನುಮತಿ ಪಡೆದಿರುವುದಿಲ್ಲ ಹಾಗೂ ರೆಸಾರ್ಟ್ ನಡೆಸುತ್ತಿರುವ ಕುರಿತು ಯಾವುದೇ ಕಚೇರಿಯಲ್ಲಿಯೂ ಸಹ ಅನುಮತಿ ಪಡೆಯದೇ ಅಕ್ರಮವಾಗಿ ಜಂಗಲ್ ಟ್ರೈಲ್ ರೆಸಾರ್ಟ್ ನಡೆಸುತ್ತಿರುವುದು ಕಂಡುಬಂದಿರುತ್ತದೆ.
ಆದ್ದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಜಂಗಲ್ ಟ್ರೈಲ್ ರೆಸಾರ್ಟ್‌ಗೆ ರಾಮನಗರ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಇಂದು ಭೇಟಿ ನೀಡಿ ರೆಸಾರ್ಟ್‌ನ ಮಾಲೀಕರಿಗೆ ನೊಟೀಸ್ ನೀಡಿ, ರೆಸಾರ್ಟ್‌ಗೆ ಬೀಗ ಮುದ್ರಿಸಿ ಮುಚ್ಚಿಸಲಾಗಿರುತ್ತದೆ ಎಂದು ರಾಮನಗರ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
