Sunday, April 20, 2025
Google search engine

Homeರಾಜ್ಯಲೋಕಸಭೆ ಚುನಾವಣೆ ಎಫೆಕ್ಟ್:ಬಸ್-ರೈಲುಗಳಲ್ಲಿ ಜನಜಂಗುಳಿ

ಲೋಕಸಭೆ ಚುನಾವಣೆ ಎಫೆಕ್ಟ್:ಬಸ್-ರೈಲುಗಳಲ್ಲಿ ಜನಜಂಗುಳಿ

ಬೆಂಗಳೂರು: ನಾಳೆ ರಾಜ್ಯದಲ್ಲಿ ನಡೆಯಲಿರುವ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಜನರು ಊರುಗಳತ್ತ ತೆರಳುತ್ತಿದ್ದು ಬಸ್ಗಳು, ರೈಲುಗಳು ಫುಲ್ ರಶ್ ಆಗಿವೆ.

ಮತದಾನ ಮಾಡಲು ಬೆಂಗಳೂರಿನಲ್ಲಿ ನೆಲೆಸಿರುವ ಮೊದಲ ಹಂತದ 14 ಲೋಕಸಭಾ ಕ್ಷೇತ್ರದ ಜನರು ರಾತ್ರಿಯೇ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ ಚುನಾವಣಾ ಕಾರ್ಯಕ್ಕೆ ಸಾರಿಗೆ ಬಸ್ಗಳನ್ನು ಬಳಸಿಕೊಳ್ಳಲಾಗಿದ್ದು, ಕೊರತೆ ಎದುರಾದ ಹಿನ್ನೆಲೆಯಲ್ಲಿ ಇರುವ ಬಸ್ಗಳಲ್ಲಿ ಜನ ಫುಲ್ ರಶ್ ಆಗಿದೆ. ಮೈಸೂರು, ಮಂಡ್ಯ, ಹಾಸನ, ತುಮಕೂರು, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ವಿವಿಧ ತಾಲೂಕು ಜಿಲ್ಲೆಗಳಿಗೆ ತೆರಳಲು ರಾತ್ರಿಯೇ ಜನರು ಬಸ್ ನಿಲ್ದಾಣಕ್ಕೆ ಜಮಾಯಿಸಿದ್ದರು.

ಇಂದು ಬೆಳಗ್ಗೆ ಕೂಡ ಮೆಜೆಸ್ಟಿಕ್, ಸ್ಯಾಟಲೈಟ್ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಕೆಲವರು ಸಾರಿಗೆ ಬಸ್ಗಳ ರಶ್ ನೋಡಿ ಖಾಸಗಿ ಬಸ್ಗಳತ್ತ ಮುಖ ಮಾಡಿದ್ದು, ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡ ಕೆಲ ಖಾಸಗಿ ಬಸ್ನವರು ಟಿಕೆಟ್ ದರ ಹೆಚ್ಚಳ ಮಾಡಿದ್ದರು. ಆದರೂ ಅನಿವಾರ್ಯವಾಗಿ ಜನರು ತೆರಳಿದರು. ಇನ್ನೂ ಕೆಲವರು 15 ದಿನಗಳ ಹಿಂದೆಯೇ ಮುಂಗಡವಾಗಿ ಟಿಕೆಟ್ಗಳನ್ನು ಬುಕ್ಕಿಂಗ್ ಮಾಡಿಕೊಂಡು ತೆರಳಿದರು. ಕೆಲವರು ಇಂದು ಸಂಜೆ ಕೆಲಸ ಮುಗಿಸಿಕೊಂಡು ಖಾಸಗಿ ಕಾರು, ಟ್ರಾವೆಲ್ಸ್ , ಬೈಕ್ಗಳಲ್ಲಿ ತೆರಳಿದ್ದಾರೆ.

ನಾಳೆ ಮತದಾನ ರಜೆ, ಶನಿವಾರ, ಭಾನುವಾರ ಸೇರಿ ಮೂರು ದಿನ ಸಾಲು ಸಾಲು ರಜೆ ಬಂದಿದ್ದು, ಕುಟುಂಬ ಸಮೇತ ಜನರು ಊರುಗಳತ್ತ ತೆರಳಿದರು. ಉತ್ತರ ಕರ್ನಾಟಕ ಭಾಗದಲ್ಲಿ ಎರಡನೆ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಆ ಭಾಗದ ಜನರು ಮಾತ್ರ ಉಳಿದಿದ್ದಾರೆ. ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಗಳು ಎಂದಿನಂತೆ ಸಂಚಾರ ನಡೆಸಿವೆ.

ಬಿಎಂಟಿಸಿ ಬಸ್ಗಳು ವಿರಳ:
ಬೆಂಗಳೂರು ಲೊಕಸಭಾ ಕ್ಷೇತ್ರಗಳ ಚುನಾವಣಾ ಕಾರ್ಯಕ್ಕೆ ಬಿಎಂಟಿಸಿ ಬಸ್ಗಳನ್ನು ತೆಗೆದುಕೊಳ್ಳಲಾಗಿದ್ದು, ಇಂದು ಬೆಳಗ್ಗೆ ಬಸ್ಗಳ ಸಂಖ್ಯೆ ಕಡಿಮೆ ಇತ್ತು. ಬಸ್ಗಳ ಕೊರತೆಯಿಂದ ಕೆಲಸ-ಕಾರ್ಯಗಳಿಗೆ ತೆರಳುವವರಿಗೆ ತೊಂದರೆಯಾಗಿದ್ದು, ಇರುವ ಬಸ್ಗಳು ಫುಲ್ ರಷ್ ಆಗಿದ್ದು, ಅನಿವಾರ್ಯವಾಗಿ ಜನರು ಪ್ರಯಾಣಿಸಿದರು.

RELATED ARTICLES
- Advertisment -
Google search engine

Most Popular