ನವದೆಹಲಿ: ಲೋಕಸಭೆ ಚುನಾವಣೆಯ 7 ಹಂತದ ಮತದಾನ ಮುಕ್ತಾಯವಾಗಿದ್ದು ,ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಜೂನ್ 4ರಂದು ಮಂಗಳವಾರ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದಲ್ಲಿ 2 ಹಾಗೂ 3ನೇ ಹಂತಗಳಲ್ಲಿ ಲೋಕಸಭೆ ಚುನಾವಣೆಗಳು ನಡೆದಿದ್ದವು. ರಾಜ್ಯದ ಮೊದಲ ಹಂತದಲ್ಲಿ ಏಪ್ರಿಲ್ 26ರಂದು ಹಾಗೂ ಎರಡನೇ ಹಂತದಲ್ಲಿ ಮೇ 7ರಂದು ತಲಾ 14 ರಂತೆ 28 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.ಇದೀಗ ದೇಶದಲ್ಲಿ ಅಂತಿಮ ಹಂತದ ಮತದಾನ ಮುಕ್ತಾಯವಾದ ಬೆನ್ನಲ್ಲೇ ವಿವಿಧ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿವೆ.ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ.
ಕರ್ನಾಟಕದಲ್ಲೂ ಎನ್ಡಿಎ ಒಕ್ಕೂಟ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದಾಗಿ ಸಮೀಕ್ಷೆಗಳಲ್ಲಿ ಹೇಳಲಾಗಿದೆ. ಆಜ್ತಕ್, ಎಬಿಪಿ ನ್ಯೂಸ್, ಝೀ ನ್ಯೂಸ್, ಇಂಡಿಯಾ ಟಿವಿ, ಸಿಎನ್ಎಕ್ಸ್, ನ್ಯೂಎಕ್ಸ್, ನ್ಯೂಸ್ 18, ಟೈಮ್ಸ್ ನೌ ಸೇರಿದಂತೆ ಅನೇಕ ಸಂಸ್ಥೆಗಳು ಮತಗಟ್ಟೆ ಸಮೀಕ್ಷೆ ನಡೆಸಿವೆ.
ಕರ್ನಾಟಕ ಎಕ್ಸಿಟ್ಪೋಲ್ ಸಮೀಕ್ಷೆ
ಇಂಡಿಯಾ ಟಿವಿ- ಸಿಎನ್ಎಕ್ಸ್ ಸಮೀಕ್ಷೆ
ಎನ್ಡಿಎ: 19-25
ಕಾಂಗ್ರೆಸ್: 4-8
ಇಂಡಿಯಾ ಟುಡೇ- ಆ್ಯಕ್ಸಿಸ್ ಮೈ ಇಂಡಿಯಾ
ಎನ್ಡಿಎ: 23-25
ಕಾಂಗ್ರೆಸ್: 3-5
ಭಾರತದ ಎಕ್ಸಿಟ್ ಪೋಲ್ ಸಮೀಕ್ಷೆ
ರಿಪಬ್ಲಿಕ್ ಭಾರತ್/ಮ್ಯಾಟ್ರೀಜ್ ಸಮೀಕ್ಷೆ
ಎನ್ಡಿಎ:353-368
ಇಂಡಿಯಾ ಕೂಟ: 118-133
ಇತರೆ: 43-48
ಅಂತಿಮವಾಗಿ, ಮತದಾರ ಯಾರ ಕೈಹಿಡಿದಿದ್ದಾನೆ ಎಂಬುದು ಜೂನ್ 4ರಂದು ಅಧಿಕೃತವಾಗಿ ಗೊತ್ತಾಗಲಿದೆ.