ಕೆ.ಆರ್.ನಗರ : ಲೋಕಸಭೆ ಚುನಾವಣೆಯನ್ನು 7ಹಂತ ಬದಲು 5ಹಂತದಲ್ಲಿ ಚುನಾವಣೆಯನ್ನು ಮಾಡುವಂತೆ ಕೇಂದ್ರ ಚುನಾವಣೆ ಆಯೋಗವನ್ನು ಕೆಪಿಸಿಸಿ ಓಬಿಸಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಂಚಿನಕೆರೆ ಯೋಗೇಶ್ ಒತ್ತಾಯಿಸಿದ್ದಾರೆ.
7 ಹಂತದಲ್ಲಿ ಚುನಾವಣೆ ನಡೆದರೇ ಸುಮಾರು 80 ದಿನ ಕನಿಷ್ಠ ಮೂರು ತಿಂಗಳ ಕಾಲ ನೀತಿ ಸಂಹಿತೆ ಇರುವುದರಿಂದ ಸರ್ಕಾರದಿಂದ ಅಭಿವೃದ್ದಿ ಕೆಲಸ ಕಾರ್ಯಗಳು ನಡೆಯದೇ ತೊಂದರೆ ಅಗುವುದನ್ನ ಕೇಂದ್ರ ಚುನಾವಣಾ ಆಯೋಗ ಮನಗಾಣ ಬೇಕು ಎಂದಿದ್ದಾರೆ.
ನೀತಿ ಸಂಹಿತೆ ಇರುವ ಕಾರಣ ಸರ್ಕಾರ ದಿಂದ ಯಾವುದೇ ಹೊಸ ಕಾಮಗಾರಿ,ಹೊಸ ಉದ್ಯೋಗ ಘೋಷಣೆ ಸೇರಿ ಇನ್ನು ಹತ್ತು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ಅಲ್ಲದೇ ರೈತರು ಮತ್ತು ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆಯಿಂದ ಅನಾನುಕೂಲ ಆಗಲಿದ್ದು ಈ ಬಗ್ಗೆ ಪರೀಶೀಲನೆ ನಡೆಸಿ 7ಹಂತದ ಬದಲು 5ಹಂತದಲ್ಲಿ ಚುನಾವಣೆ ಮಾಡಿ ಜನರಿಗೆ ಅನುಕೂಲ ಕಲ್ಪಿಸ ಬೇಕೆಂದು ಮನವಿ ಮಾಡಿದ್ದಾರೆ.
” ಕೈ ಗೆ 18 ರಿಂದ 20 ಸ್ಥಾನ “
ಈ ಬಾರಿಯ ಲೋಕ ಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಮೈಸೂರು, ಮಂಡ್ಯ,ಚಾಮರಾಜನಗರ,ಹಾಸನ,ರಾಮನಗರ ಸೇರಿದಂತೆ ಕನಿಷ್ಠ 18 ರಿಂದ 20 ಸ್ಥಾನವನ್ನು ಕಾಂಗ್ರೇಸ್ ಗೆಲ್ಲಲಿದ್ದು, ಬಿಜೆಪಿ ಈ ಚುನಾವಣೆಯಲ್ಲಿ ಮುಖಭಂಗ ಅನುಭವಿಸಲಿದೆ ಎಂದು ಯೋಗೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.