ನವದೆಹಲಿ : ಲೋಕಸಭಾ ಚುನಾವಣೆ ೬ನೇ ಹಂತದ ಮತದಾನ ಇದೇ ನಾಳೆ ಶನಿವಾರ ಮೇ ೨೫ ರಂದು ನಡೆಯಲಿದ್ದು, ೮ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ೫೮ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ೮೮೯ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಿಹಾರ (೮), ಹರಿಯಾಣ (೧೦), ಜಮ್ಮು ಮತ್ತು ಕಾಶ್ಮೀರ (೧), ಜಾರ್ಖಂಡ್ (೪) ದೆಹಲಿ (೭), ಒಡಿಶಾ (೬), ಉತ್ತರಪ್ರದೇಶ (೧೪) ಮತ್ತು ಪಶ್ಚಿಮ ಬಂಗಾಳ(೮) ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಜಮ್ಮು ಕಾಶ್ಮೀರದ ಅನಂತ್‌ನಾಗ್ ರಜೌರಿಯಲ್ಲಿ ಮೂರನೇ ಹಂತದಲ್ಲಿ ಮುಂದೂಡಲಾಗಿದ್ದ ಚುನಾವಣೆಯನ್ನು ನಾಳೆ ೬ನೇ ಹಂತದಲ್ಲಿ ನಡೆಸಲಾಗುತ್ತದೆ.
ಇನ್ನುಳಿದಂತೆ ಬಿಎಸ್‌ಪಿ ಮತ್ತು ಬಿಜೆಡಿ ತಲಾ ೪, ಜೆಡಿ(ಯು) ಮತ್ತು ತೃಣಮೂಲ ಕಾಂಗ್ರೆಸ್ ತಲಾ ಮೂರು, ಎಲ್‌ಜೆಪಿ, ಎಜೆಎಸ್‌ಯು ಮತ್ತು ನ್ಯಾಷನಲ್ ಕಾನ್ಫರೆನ್ಸ್ ತಲಾ ಒಂದು ಸ್ಥಾನವನ್ನು ಗೆದ್ದುಕೊಂಡಿತ್ತು. ಇಲ್ಲಿಯವರೆಗೆ, ೨೫ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ೫೪೩ ಕ್ಷೇತ್ರಗಳಲ್ಲಿ ೪೨೮ ಕ್ಷೇತ್ರಗಳಲ್ಲಿ ಮತದಾನ ಪೂರ್ಣ ಗೊಂಡಿದೆ. ಕೊನೆಯ ಹಂತದ ಮತದಾನ ಜೂನ್ ೧ ರಂದು ನಿಗದಿಯಾಗಿದ್ದು, ಜೂನ್ ೪ ರಂದು ಮತ ಎಣಿಕೆ ನಡೆಯಲಿದೆ.