ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೇಂದ್ರದಲ್ಲಿ ಈ ಬಾರಿ 50 ಸ್ಥಾನವನ್ನು ಗಳಿಸದಿದ್ದರೂ 25 ಗ್ಯಾರಂಟಿಗಳನ್ನು ಘೋಷಣೆ ಮಾಡುವ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಹಾಗೂ ಮಾತಿನಲ್ಲಿ ಹಿಡಿತವಿಲ್ಲದೆ ಮಾತಾಡುತ್ತಿರುವ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಉತ್ತರ ನೀಡುವಂತೆ ಮಾಜಿ ಸಚಿವ ಸಾರಾ ಮಹೇಶ್ ಮತದಾರರಲ್ಲಿ ಮನವಿ ಮಾಡಿದರು.
ಇಂದು ಮಿರ್ಲೆ ಗ್ರಾಮದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ ಬಾರಿ 40 ಸ್ಥಾನವನ್ನು ಪಡೆಯುವಲ್ಲಿ ತೃಪ್ತಿಪಟ್ಟಿದ್ದ ಕಾಂಗ್ರೆಸ್ ಪಕ್ಷವು ಈ ಬಾರಿ ದೇಶದಲ್ಲಿ 200 ಸ್ಥಾನಗಳಿಗೆ ಸ್ಪರ್ಧಿಸಿದ್ದು ಅದರಲ್ಲಿ 50 ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಬಹುದೆಂದು ತಿಳಿಸಿದ ಅವರು ಇನ್ನೂ ಕೇಂದ್ರದಲ್ಲಿ ಸರ್ಕಾರ ರಚಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಸೂರ್ಯ ಚಂದ್ರರಿರುವುದೆಷ್ಟು ಸತ್ಯವೋ ಅಷ್ಟೇ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರುವುದು ಮತ್ತು ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿಯಾಗುವುದು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಚ್ ಡಿ ಕುಮಾರಸ್ವಾಮಿ ಗೆದ್ದು ಕೇಂದ್ರದಲ್ಲಿ ಕೃಷಿ ಸಚಿವರಾಗುವುದು ಅಷ್ಟೇ ಸತ್ಯ ಎಂದು ತಿಳಿಸಿದರು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಸಾಲದ ಹೊರೆಯನ್ನೇ ಹೊರಸಿರುವುದಲ್ಲದೆ ಅಧಿಕಾರದ ಉಳಿವಿಗಾಗಿ ಸುಳ್ಳು ಭರವಸೆಯನ್ನು ನೀಡುವುದಲ್ಲದೆ 25 ಗ್ಯಾರಂಟಿಗಳ ಭರವಸೆಯ ಕಾರ್ಡನ್ನು ನಿಮ್ಮ ಮನೆಗಳಿಗೆ ನೀಡಿ ಮತದಾರರಿಗೆ ಮಂಕು ಬೂದಿ ಎರಚಲಿದ್ದಾರೆ.
ಆದ್ದರಿಂದ ಪ್ರತಿಯೊಬ್ಬ ಮತದಾರರು ಕೆ ಆರ್ ನಗರ ಮತ್ತು ಸಾಲಿಗ್ರಾಮ ತಾಲೂಕಿಗೆ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಎಚ್ ಡಿ ರೇವಣ್ಣನವರು ಮಾಡಿರುವ ಅಭಿವೃದ್ಧಿ ಪೂರ ಕಾರ್ಯಕ್ರಮಗಳನ್ನು ಒಂದು ಬಾರಿ ನೆನೆಸಿಕೊಂಡು ಮತ ನೀಡುವಂತೆ ಮನವಿ ಮಾಡಿದರು.
2013ರಲ್ಲಿ ಬರಗಾಲ ಬಂದಿದ್ದರು ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಿ ಚಾಮರಾಜನಗರದ ಎಡ ಮತ್ತು ಬಲನಾಲೆಗಳಿಗೆ ಪ್ರತಿ ವಾರಕ್ಕೊಂದು ಬಾರಿ ನೀರು ಹರಿಸಿರುವುದನ್ನು ನೆನಪಿಸಿದ ಮಾಜಿ ಸಚಿವರು ಈ ಬಾರಿ ಮಿರ್ಲೆ ಶ್ರೇಣಿ ಮತ್ತು ಅಕ್ಕಪಕ್ಕದ ಗ್ರಾಮಗಳ ನಾಲೆಗಳ ಗದ್ದೆಗೆ ಮುರಳಿಯನ್ನು ಬಿತ್ತಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ ಇಂಥ ಸ್ಥಿತಿ ನಿಮಗೆ ಬೇಕಾಗಿತ್ತಾ ಎಂದು ಕೇಳಿದ ಮಾಜಿ ಸಚಿವರು ಉದ್ಘಾಟನೆ ಮಾಡಿ ಒಂದು ವರ್ಷ ಕಳೆದರೂ ಮಿರ್ಲೆ ಗ್ರಾಮದ ಉಪ ನೋಂದಣಾಧಿಕಾರಿಯ ಕಚೇರಿಯ ಕಟ್ಟಡ ಕಾಮಗಾರಿ ಪ್ರಾರಂಭ ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನನ್ನ ಮೇಲಿನ ಬೇಸರಕ್ಕೆ ನನ್ನ ವಿರುದ್ಧ ಮತ ಚಲಾಯಿಸಿದ್ದೀರಿ ಆದರೆ ಆ ರೀತಿ ಮಾಡದೆ ಈ ಬಾರಿ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಕೊಡಿಸುವ ಮೂಲಕ ನನ್ನ ನೋವನ್ನು ಮರೆಯುವಂತೆ ಮಾಡುವುದರ ಜೊತೆಗೆ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಮಂಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಮ್ಮ ನಾಯಕರದ ಎಚ್ ಡಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಪ್ರಚಾರ ಸಭೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊಸಳ್ಳಿ ವೆಂಕಟೇಶ್ ಸಾಲಿಗ್ರಾಮ ತಾಲೂಕ್, ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ ,ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲು, ವಿಎಸ್ಎಸ್ ನ ಅಧ್ಯಕ್ಷ ಭಾಸ್ಕರ್ ,ಮಾಜಿ ತಾಲೂಕ್ ಪಂಚಾಯಿತಿ ಸದಸ್ಯ ಶೋಭಾ ಕೋಟೆಗೌಡ, ಹುಣಸಮ್ಮ ದೇವಸ್ಥಾನದ ಧರ್ಮದರ್ಶಿ ಲೋಕೇಶ್ ವಿಎಸ್ಎಸ್ ಮಾಜಿ ಅಧ್ಯಕ್ಷ ಅರವಿಂದ ,ಮಾಜಿ ಸದಸ್ಯ ನಾಗೇಶ್ ರಾಧಾಕೃಷ್ಣ, ತುಕಾರಾಂ, ಹರೀಶ್ ,ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.