ಮೈಸೂರು: ದೇಶದಾದ್ಯಂತ ಲೋಕಸಭಾ ಚುನಾವಣೆ ಮೋದಿ ಅವರ ಹೆಸರಿನಲ್ಲೇ ನಡೆಯುತ್ತದೆ. ಜನರು ಮತ ಹಾಕುವುದು ಕೂಡ ಅವರನ್ನು ನೋಡಿಯೇ ಎಂದು ಮೈಸೂರು – ಕೊಡಗು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.
ಸೋಮವಾರ ಅರಮನೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ನಾನು ಸೇರಿ ನಾವೆಲ್ಲ ಗೆಲ್ಲುವುದು ನಮ್ಮ ದೇವರು ನರೇಂದ್ರ ಮೋದಿ ಅವರ ಹೆಸರಿನಿಂದ ಎಂದು ಹೇಳಿದರು.
ನಾನೂ ಕೂಡ 2014, 2019 ರ ಚುನಾವಣೆಗಳನ್ನು ಅವರ ಹೆಸರಲ್ಲೇ ಗೆದ್ದಿದ್ದೇನೆ. ಮುಂಬರುವ ಚುನಾವಣೆಯಲ್ಲೂ ಅವರ ಹೆಸರಿನಲ್ಲೇ ಗೆಲ್ಲೋನು. ಬೇರೆಯವರ ಪ್ರಭಾವವೇನೂ ಇರುವುದಿಲ್ಲ ಎಂದರು.
ʼರಾಜ್ಯ ರಾಜಕಾರಣಕ್ಕೆ ಬನ್ನಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಕೋರಿದ್ದೇವೆ. ಆದರೆ ನನಗೆ ಪಕ್ಷದ ನೇಮಕದ ವಿಚಾರದಲ್ಲಿ ಏನೂ ಹೇಳಲು ಆಗುವುದಿಲ್ಲ, ನಾನು ಪಕ್ಷದಲ್ಲಿ ಕಿರಿಯ ಎಂದು ಹೇಳಿದರು.