ಧಾರವಾಡ : ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಭಾರತ ಚುನಾವಣಾ ಆಯೋಗವು 11-ಧಾರವಾಡ ಲೋಕಸಭೆ ಮತಕ್ಷೇತ್ರಕ್ಕೆ ಮತ ಏಣಿಕೆ ವೀಕ್ಷಕರಾಗಿ ಡೋಮನ್ ಸಿಂಗ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಮತ ಏಣಿಕೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಾರ್ವಜನಿಕರು ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದ ಅಂತರಾಷ್ಟ್ರೀಯ ಅತಿಥಿಗೃಹ ಶಾಲ್ಮಲಾದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವೀಕ್ಷಕರನ್ನು ಭೇಟಿ ಮಾಡಿ ತಮ್ಮ ದೂರುಗಳನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ ವಿಳಾಸ co11dharwadpc2024@gmail.com ಮೊಬೈಲ್ ಸಂಖ್ಯೆ 9141056513 ಗೆ ಸಂಪರ್ಕಿಸಬಹುದು ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.