Friday, February 6, 2026
Google search engine

Homeರಾಜ್ಯಸುದ್ದಿಜಾಲಮೈಸೂರಿನ 7 ಕಡೆ ಲೋಕಾ ದಾಳಿ : ಲಕ್ಷಾಂತರ ರೂ. ಪತ್ತೆ

ಮೈಸೂರಿನ 7 ಕಡೆ ಲೋಕಾ ದಾಳಿ : ಲಕ್ಷಾಂತರ ರೂ. ಪತ್ತೆ

ಮೈಸೂರು : ನಗರದಲ್ಲಿ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ್ದಾರೆ. ಇಬ್ಬರು ಭ್ರಷ್ಟರಿಗೆ ಸೇರಿದ ಒಟ್ಟು 7 ಸ್ಥಳದಲ್ಲಿ ದಾಳಿ ನಡೆಸಿರೋ ಲೋಕಾಯುಕ್ತ ಅಧಿಕಾರಿಗಳು ಮನೆ, ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದು, ಮೈಸೂರು ಮಹಾನಗರ ಪಾಲಿಕೆ ಹಾಗೂ ಟಿ.ನರಸೀಪುರ ಪುರಸಭೆ ಜೆ.ಇ. ಕೆ.ಆರ್.ಚಂದ್ರಶೇಖರ್ ಮನೆ ಹಾಗೂ ಕಚೇರಿಯಲ್ಲಿ ದಾಳಿ ನಡೆಸಲಾಗಿದೆ.

ಈ ವೇಳೆ ಚಂದ್ರಶೇಖರ್‌ಗೆ ಸಂಬಂಧಿಸಿದ ಮೈಸೂರಿನ ವಿಜಯ ನಗರದ ನಿವಾಸ, ಕೆಜಿ ಕೊಪ್ಪಲು ನಿವಾಸ ಹಾಗೂ ಟಿ.ನರಸೀಪುರ ಕಚೇರಿ ಏರಿ 4 ಕಡೆ ಏಕಕಾಲದಲ್ಲಿ ದಾಳಿ ನಡೆಸಿ 60 ಲಕ್ಷ ಹಣ ಪತ್ತೆ ಮಾಡಿದ್ದು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಇಲಾಖೆ ಡೆಫ್ಯುಟಿ ಎಲೆಕ್ಟ್ರಿಕಲ್ ಇಂಜಿನಿಯರ್ ಅಲ್ತಾಫ್ ಹುಸೇನ್ ಜಕಾರ್ತಿ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಜಕಾರ್ತಿಗೆ ಸೇರಿದ ಎರಡು ನಿವಾಸ ಹಾಗೂ ಕಚೇರಿಯಲ್ಲಿ ಲೊಕಾಯುಕ್ತ ಪೊಲೀಸರ ಶೋಧ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular