ಮೈಸೂರು : ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಡದಿಂದ ಲೋಕಾಯುಕ್ತ ವರದಿ ಸಿದ್ದಪಡಿಸಿದೆ ಎಂದು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಆರೋಪಿಸಿದರು.
ಲೋಕಾಯುಕ್ತಕ್ಕೆ ಇದ್ದ ಮರ್ಯಾದೆಯನ್ನು ಜಿಲ್ಲಾ ಮಟ್ಟದ ಲೋಕಾಯುಕ್ತ ಅಧಿಕಾರಿ ಕಳೆದಿದ್ದಾರೆ. ಲೋಕಾಯುಕ್ತ ಇದೇ ರೀತಿ ವರದಿ ಕೊಡುತ್ತದೆ ಎಂದು ಗೊತ್ತಿತ್ತು. ಲೋಕಾಯುಕ್ತ ವರದಿ ಖಂಡಿಸುತ್ತೇವೆ ಎಂದರು.
ಲೋಕಾಯುಕ್ತಕ್ಕೆ ಎಲ್ಲ ದಾಖಲೆಗಳನ್ನು ನೀಡಿದ್ದೇವೆ. ಆದರೂ ಈ ರೀತಿ ವರದಿ ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಮುಗ್ದರು, ಏನೂ ತಪ್ಪು ಮಾಡಿಲ್ಲ ಎಂಬುದಾದರೆ ೧೪ ನಿವೇಶನಗಳನ್ನು ಏಕೆ ವಾಪಸ್ ಕೊಟ್ಟರು? ಸಚಿವ ಭೈರತಿ ಸುರೇಶ್ ೧೪೧ ಫೈಲ್ ಗಳನ್ನು ಏಕೆ ತೆಗೆದುಕೊಂಡು ಹೋದರು? ಎಂದು ಶ್ರೀವತ್ಸ ಪ್ರಶ್ನಿಸಿದರು