Friday, April 11, 2025
Google search engine

Homeಅಪರಾಧಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಲೋಕಾಯುಕ್ತ ದಾಳಿ: ಲಕ್ಷಾಂತರ ರೂ. ಮೌಲ್ಯದ ಅವಧಿ ಮುಗಿದ ರೆಮ್ಡಿಸಿವರ್ ಪತ್ತೆ

ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಲೋಕಾಯುಕ್ತ ದಾಳಿ: ಲಕ್ಷಾಂತರ ರೂ. ಮೌಲ್ಯದ ಅವಧಿ ಮುಗಿದ ರೆಮ್ಡಿಸಿವರ್ ಪತ್ತೆ

ಮಂಡ್ಯ: ಕೊರೊನಾ ಕಾಲದಲ್ಲಿ ರೆಮ್ಡಿಸಿವರ್ ಎಂಬ ಇಂಜೆಕ್ಷನ್‌ಗೆ ಜನರು ಪರದಾಡುತ್ತಿದ್ದರು. ಈ ಇಂಜೆಕ್ಷನ್‌ಗೆ ಖಾಸಗಿ ಆಸ್ಪತ್ರೆಯಲ್ಲಿ 1 ರಿಂದ‌ 2 ಲಕ್ಷದವರೆಗೆ ತೆಗೆದುಕೊಂಡಿದ್ದಾರೆ. ಇದೀಗ 40 ಲಕ್ಷ ಮೌಲ್ಯದ ಅವಧಿ ಮುಗಿದಿರುವ ಇದೇ ರೆಮ್ಡಿಸಿವರ್ ಮೆಡಿಸನ್ ಮಂಡ್ಯದ ಮಿಮ್ಸ್‌ನ ಔಷಧಿ ಉಗ್ರಾಣದಲ್ಲಿ ಇರುವುದು ಕಂಡುಬಂದಿದೆ.

ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಅವಧಿ ಮೀರಿದ ಲಕ್ಷಾಂತರ ರೂಪಾಯಿಯ ಮೆಡಿಸಿನ್ ಇದ್ದು, ಅಧಿಕಾರಿಗಳು ಏಜೆನ್ಸಿಯವರೊಂದಿಗೆ ಮೆಡಿಕಲ್‌ ಮಾಫಿಯಾದಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ ಎಂದು ಕೇಶವಮೂರ್ತಿ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದರು. ದೂರಿನ ಅನ್ವಯ ಮಿಮ್ಸ್‌ನ ಔಷಧಿ ಉಗ್ರಾಣದ ಮೇಲೆ ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ನೇತೃತ್ವದಲ್ಲಿ ರೇಡ್ ಮಾಡಲಾಗಿದೆ.

ಈ ರೇಡ್‌ನಲ್ಲಿ ಪ್ರಮುಖವಾಗಿ ಕೊರೊನಾ ಕಾಲದಲ್ಲಿ ಬಹು ಬೇಡಿಕೆ ಇದ್ದ ರೆಮ್ಡಿಸಿವರ್ ಇಂಜೆಕ್ಷನ್ ಎಕ್ಸ್ಪೆರಿಯಾಗಿ ಇರೋದು ಕಂಡು ಬಂದಿದೆ. ಒಂದಲ್ಲಾ ಎರಡಲ್ಲಾ ಬರೋಬ್ಬರಿ 40 ಲಕ್ಷ ಮೌಲ್ಯದ ರೆಮ್ಡಿಸಿವರ್ ಇಂಜೆಕ್ಷನ್ ಅವಧಿ 2022ರಲ್ಲಿಯೇ ಮುಕ್ತಾಯವಾಗಿದೆ. ಕೊರೊನಾ ಸಂದರ್ಭದಲ್ಲಿ ಈ ಇಂಜೆಕ್ಷನ್ ಕೇಳಿದ್ರೆ ಮಿಮ್ಸ್‌ನ ಅಧಿಕಾರಿ ವರ್ಗ ನಮ್ಮ ಬಳಿ ಸ್ಟಾಕ್ ಇಲ್ಲ ಎಂಬ ಮಾತನ್ನು ಹೇಳುತ್ತಿತ್ತು. ಆದರೆ ಇದೀಗ ಅದೇ ರೆಮ್ಡಿಸಿವರ್ ಇಂಜೆಕ್ಷನ್ ಅಪಾರ ಮಟ್ಟದಲ್ಲಿ ಅವಧಿ ಮುಕ್ತಾಯಗೊಂಡಿದೆ.

ಕೇವಲ ರೆಮ್ಡಿಸಿವರ್ ಮಾತ್ರವಲ್ಲ ಬೇರೆ ಬೇರೆ ರೋಗಗಳಿಗೆ ನೀಡುವ ಔಷಧಿ, ಮಾತ್ರೆ, ಇಂಜೆಕ್ಷನ್‌ನ ಅವಧಿಯೂ ಮುಕ್ತಾಯವಾಗಿದೆ. ಇವುಗಳ ಮೌಲ್ಯವು ಲಕ್ಷಾಂತರ ರೂಪಾಯಿ ಆಗಿವೆ. ಈ ಅಪಾರ ಪ್ರಮಾಣ ನಷ್ಟ ಸರ್ಕಾರಕ್ಕೆ ಉಂಟಾಗಿದೆ.

RELATED ARTICLES
- Advertisment -
Google search engine

Most Popular