ವರದಿ :ಸ್ಟೀಫನ್ ಜೇಮ್ಸ್.
ಧಾರವಾಡದ ಕವಿವಿ ಪ್ರಾಧ್ಯಾಪಕ ಸುಭಾಸ್ ನಾಟೀಕಾರ್ ಮನೆ ಮತ್ತು ಕವಿವಿ ವಿವಿಧ ವಿಭಾಗದ ಮೇಲೆ ಲೋಕಾಯುಕ್ತ ದಾಳಿ
ಧಾರವಾಡ; ಕರ್ನಾಟಕ ವಿಶ್ವವಿದ್ಯಾಲಯದ ಪ್ರೊಫೆಸರ್ ಸುಭಾಸಚಂದ್ರ ನಾಟೀಕರ್ ಮನೆ ಮತ್ತು ಕವಿವಿ ವಿಭಾಗದ ಮೇಲೆ ಇಂದು ಮಂಗಳವಾರ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.

ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿರುವ ಸುಭಾಸ್ ನಾಟೀಕರ್ ಅವರು ಕರ್ನಾಟಕ ವಿವಿಯ ಅಂಬೇಡ್ಕರ್ ಸ್ಟಡೀಸ್ ಸಂಯೋಜಕ ಕೂಡ ಆಗಿದ್ದರು.ನಾಟೀಕರ್ ಅವರು ಇವತ್ತು ಕವಿವಿ ಮೌಲ್ಯ ಮಾಪನ ವಿಭಾಗದ ಕುಲಸಚಿವರಾಗಿ ಅಧಿಕಾರ ಸ್ವೀಕರಿಸುವ ತಯಾರಿಯಲ್ಲಿದ್ದರು. ಆದರೆ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಆಗಿ ದಾಳಿಮಾಡುವ ಮೂಲಕ ಶಾಕ್ ನೀಡಿದ್ದಾರೆ.

ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೊನಿಯಲ್ಲಿರುವ ಸುಭಾಸಚಂದ್ರ ನಾಟೀಕರ್ ಅವರ ಮನೆ, ಅಲ್ಲದೇ ಸಮಾಜಶಾಸ್ತ್ರ ವಿಭಾಗ, ಅಂಬೇಡ್ಕರ್ ಸ್ಟಡೀಸ್, ಕೊಪ್ಪಳದ ತಾಳಿಕೋಟೆಯ ಸ್ವಂತ ಮನೆಯ ಮೇಲೆ ಕೂಡ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಧಾರವಾಡದಲ್ಲಿಯೇ ಮೂರು ಕಡೆ ದಾಳಿ ನಡೆದಿದ್ದು, ಲೋಕಾಯುಕ್ತ ಎಸ್‌ಪಿ ಸಿದ್ಧಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.



