Friday, April 18, 2025
Google search engine

Homeರಾಜ್ಯಲೋಕಾಯುಕ್ತ ಎಸ್​ ಪಿ ಉದೇಶ್ ನಾಪತ್ತೆ: ದೂರುದಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ

ಲೋಕಾಯುಕ್ತ ಎಸ್​ ಪಿ ಉದೇಶ್ ನಾಪತ್ತೆ: ದೂರುದಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ

ಮೈಸೂರು: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕಂಡರೆ ಭಯ. ಅದೇ ಕಾರಣಕ್ಕೆ ಲೋಕಾಯುಕ್ತ ಎಸ್​ಪಿ ಉದೇಶ್ ನಾಪತ್ತೆಯಾಗಿರಬಹುದು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಕಡೆಯವರು ಅಪಹರಣ ಮಾಡಿ ಗೃಹ ಬಂಧನದಲ್ಲಿರಿಸಿರಬಹುದು. ಎಸ್​ಪಿ ಸಿದ್ದರಾಮಯ್ಯಗೆ ಹೆದರಿಕೊಂಡು ನಾಪತ್ತೆಯಾಗಿರಬಹುದು ಎಂದಿದ್ದಾರೆ.

ನಿನ್ನೆಯೇ ನಾನು ಬರುವ ಬಗ್ಗೆ ಮಾಹಿತಿ ನೀಡಿದ್ದೆ. ಆದರೂ ಲೋಕಾಯುಕ್ತ ಕಚೇರಿಯಲ್ಲಿ ಎಸ್​ಪಿ ಇಲ್ಲ. ಇದನ್ನು ನೋಡಿದರೆ ನನಗೆ ಅವರನ್ನು ಅಪಹರಣ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯ ಪ್ರಕರಣ ಉಲ್ಲೇಖಿಸಿದ ಸ್ನೇಹಮಯಿ ಕೃಷ್ಣ, ರಾಕೇಶ್ ಸಿದ್ದರಾಮಯ್ಯ ವಿರುದ್ದ ಎಫ್​ಐಆರ್​ ಹಿನ್ನೆಲೆ ಅಧಿಕಾರಿ ಮೋಹನ್‌ಗೆ ಸಿದ್ದರಾಮಯ್ಯರಿಂದ ಕಿರುಕುಳ‌ ನೀಡಿದ್ದರು.

ಮಗನ ವಿರುದ್ದ ಎಫ್​ಐಆರ್​ ಮಾಡಿದಕ್ಕೆ ಆ ರೀತಿ, ಇನ್ನು ಸಿದ್ದರಾಮಯ್ಯ ವಿರುದ್ದ ಎಫ್​ಐಆರ್​ ಮಾಡಿದರೆ? ಈ ಕಾರಣಕ್ಕೆ ಅಧಿಕಾರಿಗಳಿಗೆ ಸಿದ್ದರಾಮಯ್ಯ ಬಗ್ಗೆ ಭಯ ಇದೆ. ಈ ಹಿನ್ನೆಲೆಯಲ್ಲಿ ನಾನು ದೇವರಾಜ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ಎಂದಿದ್ದಾರೆ.

ನಿನ್ನೆ ಸಿಎಂ ವಿರುದ್ಧ ಕೇಸ್​ ದಾಖಲಿಸಬೇಕೆಂದು ಕೋರ್ಟ್​ ಹೇಳಿದೆ. ನಾನು ಲೋಕಾಯುಕ್ತ ಕಚೇರಿಗೆ ಬಂದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಲೋಕಾಯುಕ್ತ ಎಸ್​ಪಿ ಕಾಣೆಯಾಗಿದ್ದಾರೆ. ಮಧ್ಯಾಹ್ನ 3 ಗಂಟೆವರೆಗೆ ಲೋಕಾಯುಕ್ತ ಕಚೇರಿಯಲ್ಲೇ ಇರುತ್ತೇನೆ. ಬರದಿದ್ದರೆ ಎಸ್​ಪಿ ಹುಡುಕಿಕೊಡಿ ಎಂದು ದೂರು ಕೊಡಬೇಕಾಗುತ್ತೆ ಎಂದು ಹೇಳಿದ್ದಾರೆ.

ಸ್ನೇಹಮಯಿ ಕೃಷ್ಣ ದೂರು ಸ್ವೀಕರಿಸದೆ ವಾಪಸ್ಸು ಕಳುಹಿಸಿದ ಪೊಲೀಸರು

ಇದೀಗ ಸ್ನೇಹಮಯಿ ಕೃಷ್ಣ ದೂರು ಸ್ವೀಕರಿಸದೆ ಪೊಲೀಸರು ವಾಪಸ್ಸು ಕಳುಹಿಸಿದ್ದಾರೆ ಎಂದು ದೇವರಾಜ ಪೊಲೀಸ್ ಠಾಣೆಯ ಪೊಲೀಸರ ವಿರುದ್ದ ಸ್ನೇಹಮಯಿ ಕೃಷ್ಣ ಕಿಡಿಕಾರಿದ್ದಾರೆ. ಸೌಜನ್ಯಕ್ಕಾದರೂ ಪೊಲೀಸರು ವಿಚಾರಣೆ ಮಾಡಲಿಲ್ಲ. ದೇವರಾಜ ವಿಭಾಗದ ಎಸಿಪಿಗೆ ದೂರು ನೀಡುತ್ತೇನೆ ಎಂದಿದ್ದಾರೆ.

RELATED ARTICLES
- Advertisment -
Google search engine

Most Popular