ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಶ್ರೀ ಶಾತ್ತದ ಶ್ರೀ ವೈಷ್ಣವ ಸಂಘದ ನೂತನ ಅಧ್ಯಕ್ಷರಾಗಿ ಲೋಕೇಶ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ರುಕ್ಮಾಂಗದ ಅವಿರೋಧವಾಗಿ ಆಯ್ಕೆಯಾಗಿದ್ಧಾರೆ.
ಪಟ್ಟಣದ ಸತ್ಯನಾರಾಯಣಸ್ವಾಮಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಲೋಕೇಶ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ರುಕ್ಮಾಂಗದ ರವರು ಅವಿರೋಧವಾಗಿ ಆಯ್ಕೆಯಾದರು.
ಗೌರವಧ್ಯಕ್ಷರಾಗಿ ಶ್ರೀನಿವಾಸ್, ಉಪಾಧ್ಯಕ್ಷರಾಗಿ ಪ್ರಕಾಶ್, ಸಹ ಕಾರ್ಯದರ್ಶಿಯಾಗಿ ಕೃಷ್ಣಮೂರ್ತಿ, ಖಂಜಾAಜಿಯಾಗಿ ಗಣೇಶ್‌ಕುಮಾರ್, ಸಹ ಖಜಾಂಜಿಯಾಗಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿಯಾಗಿ ರಂಗಸ್ವಾಮಿ, ಮಧುಸೂದನ, ಹರೀಶ್, ಗೋಪಾಲ್ ರವರುಗಳನ್ನು ಪದಾಧಿಕಾರಿಗಳಾಗಿ ಅವಿರೋಧವಾಗಿ ಆಯ್ಕೆಮಾಡಲಾಯಿತು.
ಸಂಘದ ನೂತನ ನಿರ್ದೇಶಕರಾಗಿ ಗೋವಿಂದರಾಜು, ಯೋಗನಂದ, ಪ್ರಕಾಶ್, ರಾಮಕೃಷ್ಣ, ಶರತ್, ರಮೇಶ್, ನಾಗರತ್ನ ಆರ್. ನಾಗರತ್ನ ಜಿ.ಎಸ್, ಕುಮಾರ. ಮುತ್ತುರಾಜ್, ಗಿರೀಶ್‌ಬಾಬು, ರಾಘವನ್ ರವರುಗಳನ್ನು ಆಯ್ಕೆಮಾಡಲಾಯಿತು.