ಕಾರವಾರ : ಲಾರಿಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಹೊತ್ತಿ ಉರಿದಿದ್ದು, ಲಾರಿ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆರತಿ ಬೈಲ್‌ನ ಹುಬ್ಬಳ್ಳಿ-ಅಂಕೋಲ ಹೆದ್ದಾರಿಯಲ್ಲಿ ನಡೆದಿದೆ.
ಹೆದ್ದಾರಿ ರಸ್ತೆಯ ಬಾರ್ಡರ್ ಹಾಕಲು ಪೈಂಟ್‌ಗಳನ್ನು ಬಾಯ್ಲರ್ ಸಮೇತ ಹೊತ್ತು ತಂದಿದ್ದ ಲಾರಿ ಇದಾಗಿತ್ತು. ಲಾರಿಯಲ್ಲಿ ಇದ್ದ ಬಾಯ್ಲರ್ ಹೀಟ್ ಆಗಿ ಭಾರತ್ ಗ್ಯಾಸ್ ಸಿಲಿಂಡರ್‌ಗೆ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೇ ಲಾರಿ ಚಾಲಕ, ಸಹಚರರು ಪಾರಾಗಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



