Thursday, April 17, 2025
Google search engine

Homeಅಪರಾಧಬಂಟ್ವಾಳದಲ್ಲಿ ಲಾರಿ ಪಲ್ಟಿ ಓರ್ವ ಸಾವು: ಮೂವರಿಗೆ ಗಾಯ ಆಸ್ಪತ್ರೆಗೆ ದಾಖಲು

ಬಂಟ್ವಾಳದಲ್ಲಿ ಲಾರಿ ಪಲ್ಟಿ ಓರ್ವ ಸಾವು: ಮೂವರಿಗೆ ಗಾಯ ಆಸ್ಪತ್ರೆಗೆ ದಾಖಲು

ಬಂಟ್ವಾಳ: ಶಾಮಿಯಾನ ಸಾಗಿಸುತ್ತಿದ್ದ ಲಾರಿಯೊಂದು ಉರುಳಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ತಿರುವು ರಸ್ತೆಯಲ್ಲಿ ಇಂದು ಶುಕ್ರವಾರ ನಡೆದಿದೆ.

ಫರಂಗಿಪೇಟೆ ನಿವಾಸಿ ಕಾರ್ತಿಕ್ ಮೃತಪಟ್ಟವರು. ಗಾಯಗೊಂಡವರ ಹೆಸರು ಇನ್ನೂ ಲಭ್ಯವಾಗಿಲ್ಲ. ವಗ್ಗ ಸಮೀಪದ ಮಧ್ವ ಎಂಬಲ್ಲಿಂದ ಶಾಮಿಯಾನ ಮತ್ತಿತರ ಸಾಮಗ್ರಿ ಹೇರಿಕೊಂಡು ಪುಂಜಾಲಕಟ್ಟೆ ಕಡೆಗೆ ಲಾರಿ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಗಾಯಾಳುಗಳಿಗೆ ಪುಂಜಾಲಕಟ್ಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು, ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES
- Advertisment -
Google search engine

Most Popular