Wednesday, April 16, 2025
Google search engine

Homeರಾಜ್ಯಲಾರಿ ಮುಷ್ಕರ ಸಾರ್ವಜನಿಕರ ಹಿತಕ್ಕೆ ವಿರುದ್ಧ: ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ

ಲಾರಿ ಮುಷ್ಕರ ಸಾರ್ವಜನಿಕರ ಹಿತಕ್ಕೆ ವಿರುದ್ಧ: ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ

ಬೆಂಗಳೂರು: ಲಾರಿ ಮಾಲಕರ ಮುಷ್ಕರ ಕುರಿತು ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಾರ್ವಜನಿಕರು ಮತ್ತು ರೈತರ ಹಿತದೃಷ್ಟಿಯಿಂದ ಯಾವುದೇ ರೀತಿಯ ಮುಷ್ಕರ ಒಳಿತಲ್ಲ ಎಂದು ಹೇಳಿದ್ದಾರೆ. ಸೋಮವಾರ ಮುಷ್ಕರದ ಹಿನ್ನೆಲೆಯಲ್ಲಿ ಲಾರಿ ಮಾಲಕರ ಸಂಘದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಗಣನೀಯವಾಗಿ ಏರಿಸಿದೆ, ಆದರೆ ಆಗ ಯಾವುದೇ ಮುಷ್ಕರ ನಡೆದಿಲ್ಲ ಎಂದರು.

2015ರಲ್ಲಿ ಡೀಸೆಲ್ ಬೆಲೆ ₹49.54 ಇದ್ದು, ಈಗ ಅದು ₹91.05ಕ್ಕೆ ಏರಿಕೆಯಾಗಿದ್ದು, ಇದರ ಕಾರಣವಾಗಿ ರಾಜ್ಯಗಳು ತೆರಿಗೆ ವಿಧಿಸಲು ಬಾಧ್ಯವಾಗಿವೆ. ದೇಶದ ಆರ್ಥಿಕ ವ್ಯವಸ್ಥೆಈಗಾಗಲೇ ಮುಳುಗಿದೆ.ಆದರೆ ಇಂತಹ ವಿಷಯಗಳ ವಿರುದ್ಧ ಯಾವುದೇ ಪ್ರತಿಕ್ರಿಯೆ ಇಲ್ಲದೆ, ರಾಜ್ಯ ಸರ್ಕಾರವೇ ಗುರಿಯಾಗಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ಇತ್ತ ಲಾರಿ ಮಾಲಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ ಅವರು, “ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಲವು ಬಾರಿ ಪತ್ರ ಬರೆದಿದ್ದೇವೆ. ಸರಕಾರ ಮಾತುಕತೆಗೆ ಆಹ್ವಾನಿಸಿದರೆ, ನಾವು ಸಿದ್ಧರಾಗಿದ್ದೇವೆ,” ಎಂದು ಸ್ಪಷ್ಟಪಡಿಸಿದರು. ಅವರು, ಡೀಸೆಲ್ ದರ ಮರುಪರಿಶೀಲನೆ, ಗಡಿ ಚೆಕ್ ಪೋಸ್ಟ್‌ಗಳಲ್ಲಿ ಆರ್‌ಟಿಓ ಸುಲಿಗೆ ನಿಲ್ಲಿಸುವುದು, ಬೆಂಗಳೂರಿಗೆ ಬರುವ ಲಾರಿಗಳ ನಿರ್ಬಂಧ ಶಿಥಿಲಗೊಳಿಸುವುದು ಮತ್ತು ದಿನಬಳಕೆ ಲಾರಿಗಳ ಸಾಗಣೆ ಸುಗಮಗೊಳಿಸುವಂತೆ ಆಗ್ರಹಿಸಿದರು.

ಈ ಹಿನ್ನೆಲೆಯಲ್ಲಿ, ಸರ್ಕಾರ ಮತ್ತು ಲಾರಿ ಮಾಲಕರ ಸಂಘ ನಡುವಿನ ಮಾತುಕತೆಗಳು ಮುಂದಿನ ದಿನಗಳಲ್ಲಿ ಬಿಕ್ಕಟ್ಟಿಗೆ ಪರಿಹಾರ ನೀಡಬಹುದೆಂಬ ನಿರೀಕ್ಷೆಯಿದೆ.

RELATED ARTICLES
- Advertisment -
Google search engine

Most Popular